ಸೇನಾ ಆ್ಯಂಬುಲೆನ್ಸ್‌ನೊಂದಿಗೆ ಪರಾರಿಯಾದ ಯೋಧನ ಬಂಧನ

ಅಲಹಾಬಾದ್, ನ. 4: ಅಲಹಾಬಾದ್‌ನಿಂದ ಶನಿವಾರ ಸೇನಾ ಆ್ಯಂಬುಲೆನ್ಸ್ ಕಳವುಗೈದು ಪರಾರಿಯಾಗಲು ಯತ್ನಿಸಿದ ಯೋಧನನ್ನು ಪೊಲೀಸರು ಕಾನ್ಪುರದಿಂದ ಸುಮಾರು 200 ಕಿ.ಮೀ. ದೂರದಲ್ಲಿ ಬಂಧಿಸಿದ್ದಾರೆ.
ಆರೋಪಿ ಯೋಧನನ್ನು ಸರಬ್‌ಜೀತ್ ಚೌಧರಿ ಎಂದು ಗುರುತಿಸಲಾಗಿದೆ. ಈತ ಪೊಲೀಸರಿಗೆ ಸಿಕ್ಕಿ ಬೀಳುವ ಮುನ್ನ ಮೂರು ರಸ್ತೆ ತಡೆಗಳನ್ನು ನಾಶ ಮಾಡಿದ್ದಾನೆ. ಈ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ನಗರದಿಂದ ಸುಮಾರು 10 ಕಿ.ಮೀ. ದೂರದಲ್ಲಿರುವ ಸಾಚೆಂಡಿಯಲ್ಲಿ ಅಲಹಾಬಾದ್-ಕಾನ್ಪುರ ರಸ್ತೆಯನ್ನು ಟ್ರಕ್ ಹಾಗೂ ಸಣ್ಣ ವಾಹನಗಳನ್ನು ಬಳಸಿ ತಡೆಯಲಾಯಿತು. ಇದರಿಂದ ಕೊನೆಗೂ ಯೋಧ ಆ್ಯಂಬುಲೆನ್ಸ್ ನಿಲ್ಲಿಸಿದ್ದಾನೆ.
ಚೌಧುರಿ ಆ್ಯಂಬುಲೆನ್ಸ್‌ನೊಂದಿಗೆ ಪರಾರಿಯಾಗಿರುವುದರ ಉದ್ದೇಶ ಇದುವರೆಗೆ ತಿಳಿದುಬಂದಿಲ್ಲ. ಆದಾಗ್ಯೂ, ಅವರು ವಿವಿಧ ಕಾರಣಗಳಿಗಾಗಿ ಕ್ರೋಧಗೊಂಡಿರುವ ಘಟನೆಗಳು ನಡೆದಿವೆ. ಅಲ್ಲದೆ ತನ್ನ ಆಕ್ರೋಶವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ತೀರಿಸಿಕೊಂಡದ್ದೂ ಇದೆ
ಸರಬ್‌ಜಿತ್ ಚೌಧರಿಯನ್ನು ಲಡಾಕ್‌ಗೆ ನಿಯೋಜಿಸಲಾಗಿತ್ತು. ರಜೆಯ ಹಿನ್ನೆಲೆಯಲ್ಲಿ ಅವರು ಅಲಹಾಬಾದ್‌ಗೆ ಬಂದಿದ್ದರು.
ಕಾನ್ಪುರದಿಂದ ಮಹಾರಾಜ್‌ಪುರ (40 ಕಿ.ಮೀ.), ಫತೇಪುರ್ (80 ಕಿ.ಮೀ.) ಹಾಗೂ ಕೌಶಾಂಬಿ (150 ಕಿ.ಮೀ.) ಹಾದು ಹೋಗಿದ್ದ ಈ ಯೋಧ, ರಸ್ತೆ ತಡೆಗೆ ಆ್ಯಂಬುಲೆನ್ಸ್ ನಿಲ್ಲಿಸುತ್ತಿಲ್ಲ ಎಂದು ಅರಿವಾದ ಬಳಿಕ ನಾವು ಭಾರೀ ಟ್ರಕ್‌ಗಳನ್ನು ನಿಲ್ಲಿಸಿ ಸಂಚಾರ ಅಡಚಣೆ ಉಂಟು ಮಾಡಿದೆವು.
ಸಮೀಕ್ಷಾ ಪಾಂಡೆ, ಸದಾರ್ ಸರ್ಕಲ್ ಅಧಿಕಾರಿ







