ಹಳೆಕೋಟೆ : ತಾಜುಲ್ ಉಲಮಾ ಮದ್ರಸ ಅಸ್ತಿತ್ವಕ್ಕೆ

ಹಳೆಕೋಟೆ, ನ. 4: ಮದ್ರಸ ಕಾರ್ಯಕ್ಷೇತ್ರವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಮತ್ತು ಧಾರ್ಮಿಕ ವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸುವ ಸಲುವಾಗಿ ಉಳ್ಳಾಲದ ಹಳೆಕೋಟೆಯಲ್ಲಿ ನೂತನ ಮದ್ರಸಕ್ಕೆ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷ ಸಯ್ಯಿದ್ ಜಲಾಲ್ ತಂಙಳ್ ನೇತೃತ್ವದಲ್ಲಿ ಚಾಲನೆ ನೀಡಲಾಯಿತು.
ಮದ್ರಸಕ್ಕೆ ತಾಜುಲ್ ಉಲಮಾ (ಖ.ಸಿ) ಮದ್ರಸ ಎಂಬ ನಾಮಕರಣ ಮಾಡಲಾಯಿತು. ಪ್ರಸ್ತುತ ಮದ್ರಸ ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡ್ ಆಫ್ ಇಂಡಿಯಾ ಸಿಲೆಬಸ್ ಹಾಗು ಅಂಗೀಕಾರದೊಂದಿಗೆ ಕಾರ್ಯಾಚರಿಸಲಿದೆ.
ಮುಸ್ತಫ ಮದನಿ ಉಳ್ಳಾಲ ಸಮಾರಂಭವನ್ನು ಉದ್ಘಾಟಿಸಿದರು. ಅಬ್ದುಲ್ ಹಮೀದ್ ಮುಸ್ಲಿಯಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಿಕ ತಾಜುಲ್ ಉಲಮಾ ಖ.ಸಿ ಮದ್ರಸ ಇದರ ನೂತನ ಸಮಿತಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಯು ಎಚ್ ಯೂಸುಫ್, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕರ್, ಕೋಶಾಧಿಕಾರಿಯಾಗಿ ಅಬ್ಬಾಸ್ ರಫೀಖ್, ಸಂಚಾಲಕರಾಗಿ ಅಬ್ದುಲ್ ಸತ್ತಾರ್ ಹಳೆಕೋಟೆ, ಉಪಾಧ್ಯಕ್ಷರಾಗಿ ಅಬೂಸಾಲಿ, ಜೊತೆ ಕಾರ್ಯದರ್ಶಿಯಾಗಿ ಅಶ್ರಫ್ ಹಾಗು ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಅಬ್ದುಲ್ ಹಮೀದ್, ಬಶೀರ್, ಅಬ್ದುರ್ರಹ್ಮಾನ್, ಹಂಝ, ಇಬ್ರಾಹಿಂ ಹಾಗು ಕಬೀರ್ ಇವರುಗಳನ್ನು ಆಯ್ಕೆ ಮಾಡಲಾಯಿತು.





