ಮುನ್ರೊ 2 ಶತಕ ಸಿಡಿಸಿದ ವಿಶ್ವದ ನಾಲ್ಕನೆ ಬ್ಯಾಟ್ಸ್ ಮನ್
ರಾಜ್‌ಕೋಟ್, ನ.4: ಭಾರತ ವಿರುದ್ಧ ಎರಡನೆ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅಜೇಯ 109 ರನ್ ಗಳಿಸಿದ ಮುನ್ರೊ ಎರಡು ಬಾರಿ ಟ್ವೆಂಟಿ-20 ಶತಕ ಬಾರಿಸಿದ ವಿಶ್ವದ ನಾಲ್ಕನೆ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಭಾರತದ ಆಟಗಾರರಿಂದ ಎರಡು ಬಾರಿ ಜೀವದಾನ ಪಡೆದ ಎಡಗೈ ಬ್ಯಾಟ್ಸ್‌ಮನ್ ಮುನ್ರೊ ಈ ವರ್ಷ ಎರಡು ಶತಕ ಬಾರಿಸಿದ ಮೊದಲ ಆಟಗಾರನೆಂಬ ಸಾಧನೆ ಮಾಡಿದರು. ಕ್ರಿಸ್ ಗೇಲ್, ಬ್ರೆಂಡನ್ ಮೆಕಲಮ್ ಹಾಗೂ ರಿಚರ್ಡ್ ಲೇವಿ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಎರಡು ಶತಕ ಬಾರಿಸಿದ ಸಾಧನೆ ಮಾಡಿದ್ದಾರೆ. 54 ಎಸೆತಗಳನ್ನು ಎದುರಿಸಿದ ಮುನ್ರೊ 6 ಸಿಕ್ಸರ್‌ಗಳು ಹಾಗೂ 7 ಬೌಂಡರಿಗಳ ಸಹಿತ ಅಜೇಯ 109 ರನ್ ಬಾರಿಸಿದರು.
Next Story





