ರಣಜಿಯಲ್ಲಿ ಪೂಜಾರ ಬುಂಡೇಲಾ ದಾಖಲೆ
ಹೊಸದಿಲ್ಲಿ, ನ.4: ರಣಜಿ ಟ್ರೋಫಿಯ ನಾಲ್ಕನೆ ಸುತ್ತಿನ ಪಂದ್ಯಗಳು ಮುಕ್ತಾಯಗೊಂಡಿದ್ದು, 12 ಪಂದ್ಯಗಳಲ್ಲಿ 10 ಪಂದ್ಯಗಳ ಫಲಿತಾಂಶ ಲಭ್ಯವಾಗಿದೆ. ಒಡಿಶಾ ವಿರುದ್ಧ ಮುಂಬೈ ತಂಡ ಭುವನೇಶ್ವರದಲ್ಲಿ ನಡೆದ ಪಂದ್ಯದಲ್ಲಿ 121 ರನ್‌ಗಳ ಜಯ ಗಳಿಸುವ ಮೂಲಕ ಈ ಆವೃತ್ತಿಯಲ್ಲಿ ಮೊದಲ ಗೆಲುವು ದಾಖಲಿಸಿದೆ. ಹಾಲಿ ಚಾಂಪಿಯನ್ ಗುಜರಾತ್ ಮೂರನೆ ಗೆಲುವು ದಾಖಲಿಸಿದೆ. ಜಾರ್ಖಂಡ್ ವಿರುದ್ಧ 6 ವಿಕೆಟ್‌ಗಳ ಗೆಲುವಿನೊಂದಿಗೆ ಸೌರಾಷ್ಟ್ರ ಮೂರನೆ ಪಂದ್ಯ ಗೆದ್ದುಕೊಂಡಿದೆ.
ಪಂಜಾಬ್, ಹೈದರಾಬಾದ್, ದಿಲ್ಲಿ, ಕರ್ನಾಟಕ, ಕೇರಳ ಮತ್ತು ಆಂಧ್ರಪ್ರದೇಶ ಜಯ ಗಳಿಸಿವೆೆ. ಬಂಗಾಳ ಮತ್ತು ಹಿಮಾಚಲ ಪ್ರದೇಶ ತಂಡಗಳ ನಡುವಿನ ಪಂದ್ಯ ಡ್ರಾನಲ್ಲಿ ಕೊನೆಗೊಂಡಿದೆ.
Next Story





