Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಸೌದಿಯ ಶತಕೋಟ್ಯಾಧಿಪತಿ ರಾಜಕುಮಾರ...

ಸೌದಿಯ ಶತಕೋಟ್ಯಾಧಿಪತಿ ರಾಜಕುಮಾರ ಅಲ್‌ವಾಲೀದ್‌ ಬಿನ್‌ ತಲಾಲ್‌ ಸೇರಿದಂತೆ ಹಲವರ ಸೆರೆ

ವಾರ್ತಾಭಾರತಿವಾರ್ತಾಭಾರತಿ5 Nov 2017 12:36 PM IST
share
ಸೌದಿಯ ಶತಕೋಟ್ಯಾಧಿಪತಿ ರಾಜಕುಮಾರ ಅಲ್‌ವಾಲೀದ್‌ ಬಿನ್‌ ತಲಾಲ್‌  ಸೇರಿದಂತೆ ಹಲವರ ಸೆರೆ

ರಿಯಾದ್, ನ.5: ಶನಿವಾರ ನಡೆಸಲಾದ ಭ್ರಷ್ಟಾಚಾರ ವಿರೋಧಿ ಅಭಿಯಾನದಲ್ಲಿ ಸೌದಿ ಅರೇಬಿಯಾದ 11 ರಾಜಕುಮಾರರನ್ನು ಹಾಗೂ ಸುಮಾರು 12 ಸಚಿವರನ್ನು ಬಂಧಿಸಲಾಗಿದೆ. ಬಂಧಿತ ರಾಜಕುಮಾರರು ನಿರ್ವಹಿಸುತ್ತಿದ್ದ ಉನ್ನತಾಧಿಕಾರವನ್ನು ಕಿತ್ತುಕೊಳ್ಳಲಾಗಿದೆ ಎಂದು ಸರಕಾರಿ ಸ್ವಾಮ್ಯದ ಅಲ್ -ಅರೇಬಿಯಾ ವಾರ್ತಾವಾಹಿನಿ ವರದಿಮಾಡಿದೆ.

ಸೌದಿಯ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ನೇತೃತ್ವದಲ್ಲಿ ನೂತನ ಭ್ರಷ್ಟಾಚಾರ ವಿರೋಧಿ ಸಮಿತಿಯನ್ನು ರಚಿಸಲಾಗಿದ್ದು ಈ ಸಮಿತಿಯು ನೀಡಿದ ವರದಿಯ ಆಧಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

   ಜಿದ್ದಾದಲ್ಲಿ 2009ರಲ್ಲಿ ಸಂಭವಿಸಿದ ಪ್ರವಾಹ ಪರಿಸ್ಥಿತಿ ಸಂತ್ರಸ್ತರಿಗೆ ಹಾಗೂ ಕಳೆದ ಕೆಲ ವರ್ಷಗಳಿಂದ ಮಾರಕವಾಗಿ ಹಬ್ಬಿರುವ ‘ಮಿಡ್ಲ್ ಈಸ್ಟ್ ರೆಸಿಪಿರೇಟರಿ ಸಿಂಡ್ರೋಮ್(ಎಂಇಆರ್‌ಎಸ್)’ ಮಾರಕ ವೈರಾಣು ದುರಂತದಲ್ಲಿ ಸಂತ್ರಸ್ತರಾದವರಿಗೆ ಪರಿಹಾರ ವಿತರಿಸುವ ಯೋಜನೆಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಬಗ್ಗೆ ಸಮಿತಿ ತನಿಖೆ ನಡೆಸಿತ್ತು. ಆರೋಪಿಗಳ ವಿರುದ್ಧ ಬಂಧನ ವಾರಂಟ್ ಜಾರಿಯಾಗಬಹುದು ಹಾಗೂ ಸಂಚಾರಕ್ಕೆ ನಿರ್ಬಂಧ ವಿಧಿಸಬಹುದು ಎಂದು ಮೂಲಗಳು ತಿಳಿಸಿವೆ. ಅಲ್ಲದೆ ನ್ಯಾಯಾಲಯಕ್ಕೆ ಪ್ರಕರಣವನ್ನು ವರ್ಗಾಯಿಸುವವರೆಗೆ ಬ್ಯಾಂಕ್ ಖಾತೆ ಸ್ತಂಭನ, ನಿಧಿ ವರ್ಗಾಯಿಸಿದ ಪ್ರಕರಣಗಳ ಬಗ್ಗೆ ತನಿಖೆ ಮತ್ತು ಭವಿಷ್ಯದಲ್ಲಿ ನಿಧಿ ವರ್ಗಾಯಿಸದಂತೆ ತಡೆಯುವುದು ಅಥವಾ ಯಾವುದೇ ಅಕ್ರಮ ನಡೆಯದಂತೆ ಕ್ರಮ ಕೈಗೊಳ್ಳುವ ಅಧಿಕಾರವನ್ನು ಸಮಿತಿ ಹೊಂದಿದೆ.

ಬಂಧಿಸಲ್ಪಟ್ಟ ಅಥವಾ ಪದಚ್ಯುತಗೊಂಡ ಪ್ರಮುಖರು

►ರಾಜಕುಮಾರ ಮಿತಾಬ್ ಬಿನ್ ಅಬ್ದುಲ್ಲಾ: ಸೌದಿ ನ್ಯಾಷನಲ್ ಗಾರ್ಡ್(ಶ್ವೇತ ಸೇನೆ ಎಂದೂ ಕರೆಯಲಾಗುತ್ತದೆ)ನ ಮಾಜಿ ಮುಖ್ಯಸ್ಥ . ದಿವಂಗತ ರಾಜ ಅಬ್ದುಲ್ಲಾರ ಪುತ್ರ. ತಂದೆಯ ಮರಣಾನಂತರ ಇವರೇ ರಾಜಸಿಂಹಾಸನ ಏರುವರೆಂದು ನಿರೀಕ್ಷಿಸಲಾಗಿತ್ತು. ಇದೀಗ ಇವರ ಸ್ಥಾನದಲ್ಲಿ ರಾಜಕುಮಾರ ಖಾಲಿದ್ ಬಿನ್ ಅಯಫ್ ಅವರು ಶ್ವೇತಸೇನೆಯ ಮುಖ್ಯಸ್ಥರಾಗಿ ನೇಮಕವಾಗಿದ್ದಾರೆ.

►ರಾಜಕುಮಾರ ಅಲ್‌ವಲೀದ್ ಬಿನ್ ತಲಾಲ್: ಪ್ರಭಾವಿ ಉದ್ಯಮಿಯಾಗಿರುವ ತಲಾಲ್ ಆ್ಯಪಲ್, ಟ್ವಿಟರ್, ಸಿಟಿಗ್ರೂಪ್ ಮುಂತಾದ ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಬಂಡವಾಳ ಹೂಡಿದ್ದಾರೆ ಎನ್ನಲಾಗುತ್ತಿದ್ದು ವಿಶ್ವದ ಅತೀ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರೆನಿಸಿದ್ದಾರೆ.

►ಆದಿಲ್ ಫಕ್ಹೀ: ಆರ್ಥಿಕ ಮತ್ತು ಯೋಜನಾ ಸಚಿವ. ಇಂಜಿನಿಯರಿಂಗ್ ಪದವೀಧರರಾಗಿರುವ ಇವರು ಈ ಹಿಂದೆ ಕಾರ್ಮಿಕ ಹಾಗೂ ಆರೋಗ್ಯ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. ಇವರ ಸ್ಥಾನದಲ್ಲಿ ಮುಹಮ್ಮದ್ ಅಲ್-ತುವೈಜ್ರಿ ನೇಮಕಗೊಂಡಿದ್ದಾರೆ.

►ಅಡ್ಮಿರಲ್ ಅಬ್ದುಲ್ಲಾ ಅಲ್-ಸುಲ್ತಾನ್: ಸೌದಿ ನೌಕಾಪಡೆಯ ಮಾಜಿ ಕಮಾಂಡರ್. ಇವರ ಸ್ಥಾನದಲ್ಲಿ ಅಡ್ಮಿರಲ್ ಫಹದ್ ಬಿನ್ ಅಬ್ದುಲ್ಲಾ ನೇಮಕಗೊಂಡಿದ್ದಾರೆ.

‘ದೊರೆ ಭ್ರಷ್ಟ್ರಾಚಾರದ ವಿರುದ್ಧ ಹೋರಾಡುತ್ತಿದ್ದಾರೆ’

 ಸೌದಿ ದೊರೆ ಭ್ರಷ್ಟಾಚಾರ ವಿರೋಧಿ ಸಮಿತಿ ರಚಿಸಿರುವ ಘೋಷಣೆ ಮಾಡಿದ ಕೆಲ ಗಂಟೆಗಳಲ್ಲೇ- ದೊರೆ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದಾರೆ ಎಂಬ ಹ್ಯಾಶ್‌ಟ್ಯಾಗ್ ಲೈನ್‌ಗೆ ವಿಶ್ವದಾದ್ಯಂತ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ರವಿವಾರದವರೆಗೆ 5,36,000 ಬಾರಿ ಹ್ಯಾಶ್‌ಟ್ಯಾಗ್ ಲೈನನ್ನು ಬಳಸಲಾಗಿದ್ದು ಸೌದಿ ದೊರೆ ಮತ್ತು ಯುವರಾಜನ ಚಿತ್ರವನ್ನು ನೆಟ್ಟಿಗರು ಶೇರ್ ಮಾಡಿಕೊಂಡರು. ಸೌದಿ ಅರೇಬಿಯಾದಲ್ಲಿ ಟ್ವಿಟರ್ ಬಳಕೆದಾರರು ದೊರೆಯ ಈ ಆದೇಶವನ್ನು ಒಪ್ಪಿಕೊಂಡಿದ್ದಾರೆ. ‘ದೃಢ ನಿರ್ಧಾರದ ಸಲ್ಮಾನ್’ ಎಂಬ ಹ್ಯಾಶ್‌ಟ್ಯಾಗ್ ಕೂಡಾ ಜನಪ್ರಿಯವಾಗಿದೆ. ಸೌದಿ ದೊರೆ ಕೈಗೊಂಡ ನಿರ್ಧಾರದಿಂದ ಆಡಳಿತದ ಬಗ್ಗೆ ವಿಶ್ವಾಸ ಹೆಚ್ಚಿದೆ ಹಾಗೂ ಸೌದಿಯಲ್ಲಿ ಇರುವ ಹೂಡಿಕೆದಾರರ ಪರವಾದ ಪರಿಸ್ಥಿತಿಯನ್ನು ಸಂರಕ್ಷಿಸಿದೆ ಎಂದು ಈ ಸೌದಿಯ ವಿತ್ತ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಿರುವುದಾಗಿ ಅಲ್-ಅರೇಬಿಯಾ ಟಿವಿ ಚಾನೆಲ್ ವರದಿ ಮಾಡಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X