ಬೆಂಗಳೂರಿನ ಸಅದಿಯ ವಿದ್ಯಾ ಸಂಸ್ಥೆಯ ಸ್ಫಟಿಕ ಮಹೋತ್ಸವಕ್ಕೆ ಚಾಲನೆ

ಬೆಂಗಳೂರು, ನ.5: ಬೆಂಗಳೂರಿನ ಸಅದಿಯ ವಿದ್ಯಾ ಸಂಸ್ಥೆಯ 15ನೆ ಸಂಭ್ರಮಾಚರಣೆಯ ಸ್ಫಟಿಕ ಮಹೋತ್ಸವಕ್ಕೆ ರವಿವಾರ ಚಾಲನೆ ದೊರೆಯಿತು.
ಇಂದು ಬೆಳಗ್ಗೆ ಇಲ್ಲಿನ ಶಾನುಭೋಗನಹಳ್ಳಿ ಬನ್ನೇರುಗಟ್ಟದಲ್ಲಿ ನಡೆದ ಕಾರ್ಯಕ್ರಮದಲ್ಲಿ ಫಿಝಾ ಸಮೂಹ ಸಂಸ್ಥೆಯ ಸಹಕಾರದೊಂದಿಗೆ ಅನಾಥ ನಿರ್ಗತಿಕರ ಕೇಂದ್ರ ‘ಆಯಿಷಮ್ಮ ಮೆಮೋರಿಯಲ್’ ಕಟ್ಟಡದ ಉದ್ಘಾಟನೆ ಮತ್ತು ಹಾಜಿ ಹಾಮನ್ ಬಾವ ಮೆಮೋರಿಯಲ್ ‘ಸಅದಿಯ ಹ್ಯಾಪಿ ಲೀವಿಂಗ್ ರೆನ್’ಗೆ ಶಂಕು ಸ್ಥಾಪನೆ ಕಾರ್ಯಕ್ರಮ ನೆರವೇರಿತು.
ಸಮಾರಂಭದಲ್ಲಿ ಸೈಯದ್ ಆಟಕ್ಕೋಯ ತಂಙಳ್ ಕುಂಬೋಳ್, ಸೈಯದ್ ಶಂಸುಲ್ ಹಕ್ ಖಾದ್ರಿ ಅಲ್ ಹುಸೇನಿ, ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ಬಿ.ಎಂ.ಫಾರೂಕ್, ಇಸ್ಮಾಯೀಲ್ ಸಖಾಫಿ ಕೊಂಡಂಗೇರಿ ಮೊದಲಾದವರು ಭಾಗವಹಿಸಿದ್ದರು.
Next Story





