ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುಎಫ್‌ಸಿಗೆ ಅಭಿನಂದನೆ

ಉಡುಪಿ, ನ.5: ದುಬೈಯ ಉದ್ಯಾವರ ಮುಸ್ಲಿಂ ಯುನಿಟಿ ವತಿಯಿಂದ ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಸಂಸ್ಥೆಯನ್ನು ರವಿವಾರ ಅಭಿನಂಧಿಸಲಾಯಿತು.
ಯುಎಫ್‌ಸಿಯ ಸ್ಥಾಪಕ ಸದಸ್ಯ, ಯುನಿಟಿಯ ಮಾಜಿ ನಿರ್ದೇಶಕ ಮಹಮ್ಮದ್ ಅನ್ಸರ್ ಅಜೀಜ್ ಮಾತನಾಡಿ,ಪ್ರಶಸ್ತಿ ಪಡೆಯಲು ಸಂಸ್ಥೆಗೆ ಒಂದು ಸಾಮಾಜಿಕ ಬದ್ದತೆ ಇರಬೇಕಾಗಿದೆ. ಈ ರೀತಿ ಸಾಮಾಜಿಕ ಬದ್ದತೆ ಈ ಸಂಸ್ಥೆಗೆ ಇರುವುದರಿಂದಲೇ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ ಎಂದು ಹೇಳಿದರು.
ಯುಎಫ್‌ಸಿಯ ನಿರ್ದೇಶಕ ಉದ್ಯಾವರ ನಾಗೇಶ್ ಕುಮಾರ್, ಸಂಸ್ಥೆಯ ಅಧ್ಯಕ್ಷ ಅನುಪ್ ಕುಮಾರ್, ಉದ್ಯಾವರ ಗ್ರಾಪಂ ಅಧ್ಯಕ್ಷೆ ಸುಗಂಧಿ ಶೇಖರ್, ಉಪಾಧ್ಯಕ್ಷ ರಿಯಾಝ್ ಪಳ್ಳಿ ಮಾತನಾಡಿದರು. ದುಬೈ ಮುಸ್ಲಿಂ ಯುನಿಟಿ ಕೋಶಾಧಿಕಾರಿ ಶಾಬಿರ್ ಶಾಬುದ್ದಿನ್, ಕ್ರೀಡಾ ಕಾರ್ಯದರ್ಶಿ ಮುಹಮ್ಮದ್ ಜುಬೇರ್, ಸ್ಥಾಪಕ ಪ್ರಧಾನ ಕಾರ್ಯದರ್ಶಿ ಖಾಲಿಕ್ ಹೈದರ್, ಜಾಮಿಯಾ ಮಸೀದಿಯ ಅಧ್ಯಕ್ಷ ಅಬ್ದುಲ್ ಸತ್ತಾರ್, ಯುಎಫ್‌ಸಿಯ ಪ್ರಧಾನ ಕಾರ್ಯ ದರ್ಶಿ ಗಿರೀಶ್ ಯು., ಉಪಾಧ್ಯಕ್ಷ ಸೋಮಶೇಖರ್ ಸುರತ್ಕಲ್, ಮಾಜಿ ಅಧ್ಯಕ್ಷ ಯು.ಆರ್.ಚಂದ್ರಶೇಖರ್, ಮಾಜಿ ಗ್ರಾಪಂ ಅಧ್ಯಕ್ಷರಾದ ಚಂದ್ರಾವತಿ ಎಸ್. ಭಂಡಾರಿ, ಸರಳಾ ಕೋಟ್ಯಾನ್, ಮಾಜಿ ಪ್ರಧಾನ ಕಾರ್ಯದರ್ಶಿ ತಿಲಕ್‌ರಾಜ್ ಸಾಲ್ಯಾನ್, ಸದಸ್ಯರುಗಳಾದ ಅನ್ಸರ್ ಸತ್ತಾರ್, ವಿಶ್ವನಾಥ ಪೂಜಾರಿ, ವಿಷ್ಣು ಬಿ. ಶೆಟ್ಟಿಗಾರ್, ಹಮೀದ್ ಶಾಬ್ಜಾನ್, ಶ್ರೀಧರ ಕಲಾಯಿ ಮೊದಲಾದವರು ಉಪಸ್ಥಿತರಿದ್ದರು. ಖಾಲಿಕ್ ಹೈದರ್ ಸ್ವಾಗತಿಸಿ, ವಂದಿಸಿದರು.





