ಬೆಲೆ ನಿಯಂತ್ರಿಸದಿದ್ದರೆ ಪ್ರಧಾನಿ ಕೆಳಗಿಳಿಯಲಿ: ರಾಹುಲ್

ಹೊಸದಿಲ್ಲಿ, ನ. 5: ಅಡುಗೆ ಅನಿಲದ ಬೆಲೆ ಮತ್ತೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವನ್ನು ರವಿವಾರ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಸಿಂಹಾಸನದಿಂದ ಕೆಳಗಿಳಿಯಲಿ (ಪ್ರಧಾನಿ ಹುದ್ದೆಯಿಂದ) ಎಂದು ಮೋದಿ ಅವರನ್ನು ಆಗ್ರಹಿಸಿದ್ದಾರೆ.
ಅಡುಗೆ ಅನಿಲದ ಬೆಲೆ ಏರಿಕೆಯಾಗುತ್ತಿದೆ, ಪಡಿತರ ಬೆಲೆ ಏರಿಕೆಯಾಗುತ್ತಿದೆ. ಪೊಳ್ಳು ಭರವಸೆಗಳನ್ನು ನೀಡುವುದನ್ನು ನಿಲ್ಲಿಸಿ. ದರ ನಿಗದಿ ಮಾಡಿ, ಉದ್ಯೋಗ ನೀಡಿ ಅಥವಾ ಪ್ರಧಾನಿ ಸ್ಥಾನದಿಂದ ಕೆಳಗಿಳಿಯಿರಿ ಎಂದು ರಾಹುಲ್ ಗಾಂಧಿ ಬೆಲೆ ಏರಿಕೆಯ ವರದಿಯೊಂದನ್ನು ಲಗತ್ತಿಸಿ ಟ್ವೀಟ್ ಮಾಡಿದ್ದಾರೆ.
ರಾಷ್ಟ್ರ ಸ್ವಾಮಿತ್ವದ ತೈಲ ಕಂಪೆನಿಗಳು ಬುಧವಾರ ಬೆಲೆ ಏರಿಕೆ ಘೋಷಿಸಿರುವುದನ್ನು ರಾಹುಲ್ ಗಾಂಧಿ ಉಲ್ಲೇಖಿಸಿದ್ದಾರೆ.
Next Story





