ಲಾರಿ ಚಾಲನೆ : 7 ವರ್ಷದ ಬಾಲಕಿಯಿಂದ ದಾಖಲೆ ನಿರ್ಮಾಣ
ಮೈಸೂರು, ನ.5: ಏಳು ವರ್ಷದ ಬಾಲಕಿಯೊಬ್ಬಳು ಯಶಸ್ವಿಯಾಗಿ ಲಾರಿ ಚಾಲನೆ ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಿರ್ಮಿಸಿದ್ದಾಳೆ.
ಮೈಸೂರಿನ ಈದ್ಗಾ ಮೈದಾನದಲ್ಲಿ ಪ್ರದರ್ಶನ ನಡೆಸಲಾಗಿತ್ತು. ಬನ್ನಿ ಮಂಟಪದ ಸೈಂಟ್ ಜೋಸೆಫ್ ಶಾಲೆಯಲ್ಲಿ ಎರಡನೆ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿ ರಿಫಾ ತಷ್ಕಿನ್ ಹತ್ತು ಚಕ್ರದ ಲಾರಿ ಚಾಲನೆ ಮಾಡಿ ತೋರಿಸುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾಳೆ. ಆಕೆಯ ಸಾಧನೆಯನ್ನು ಪರಿಗಣಿಸಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯ ಮ್ಯಾನೇಜರ್ ಸಂತೋಷ್ ಅಗರ್ ವಾಲ್ ರೆಕಾರ್ಡ್ ಘೋಷಣೆ ಮಾಡಿದ್ದಾರೆ.
Next Story





