ದಾವಣಗೆರೆ : ಪ್ರತಿಭಾ ಪುರಸ್ಕಾರ ಸಮಾರಂಭ

ದಾವಣಗೆರೆ,ನ.5: ಪ್ರತಿಭಾ ಪುರಸ್ಕಾರಕ್ಕೆ ಒಳಗಾದ ವಿದ್ಯಾರ್ಥಿಗಳ ಸಾಮಾಜಿಕ ಜವಾಬ್ದಾರಿ ಇನ್ನು ಮುಂದೆ ಹೆಚ್ಚಾಗಲಿದೆ. ಶಿಕ್ಷಣ ವಲಯದಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಮೌಲ್ಯಯುತವಾದ ಜೀವನ ನಡೆಸಬೇಕು ಎಂದು ಸುಕ್ಷೇಮ ಆಸ್ಪತ್ರೆ ವೈದ್ಯ ಡಾ. ಶ್ರೀಶೈಲ ಬ್ಯಾಡಗಿ ಹೇಳಿದರು.
ನಗರದ ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲಾ ಟ್ರಸ್ಟ್ ಸಭಾಂಗಣದಲ್ಲಿ ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲಾ ಟ್ರಸ್ಟ್ ನಿಂದ ರವಿವಾರ ಹಮ್ಮಿಕೊಂಡಿದ್ದ 150 ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ನಮ್ಮ ಪ್ರತಿಭೆ ನಮಗೆ ಗೊತ್ತಿರುವುದಿಲ್ಲ. ಅದನ್ನು ಗುರುತಿಸಿ ಸನ್ಮಾನಿಸುವುದು ಶ್ರೇಷ್ಠ ಕೆಲಸ. ಅಂಥ ಕಾರ್ಯವನ್ನು ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲಾ ಟ್ರಸ್ಟ್ ಮಾಡಿಕೊಂಡು ಬರುತ್ತಿದೆ ಎಂದರು.
ಜೀವನ ದೇವರ ಆಡುವ ಆಟವೆಂದು ಹಿರಿಯರು ಹೇಳುತ್ತಾರೆ. ಅವರು ತಮ್ಮ ಅನುಭವದಿಂದ ಈ ಮಾತು ಹೇಳಿದ್ದಾರೆ. ದೇವರ ಮೇಲೆ ನಂಬಿಕೆ ಇಟ್ಟು ಒಳ್ಳೆಯ ಕಾರ್ಯಗಳನ್ನು ಮಾಡಬೇಕು. ಬದುಕಿನಲ್ಲಿ ಸೋಲು-ಗೆಲುವು ಸಮಾನವಾಗಿ ಸ್ವೀಕರಿಸಬೇಕು. ಫೇಲಾದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಸಲಹೆ ನೀಡಿದರು.
ಟ್ರಸ್ಟ್ ಅಧ್ಯಕ್ಷ ಚನ್ನಗಿರಿ ಆರ್. ವಿರೂಪಾಕ್ಷ ಮಾತನಾಡಿ, ವಿದ್ಯೆ ಹಣಕೊಟ್ಟುಕೊಳ್ಳವುದಲ್ಲ. ಇದು ಕದಿಯಲಾರದ ಸಂಪತ್ತು. ಇದನ್ನು ಕಷ್ಟಪಟ್ಟು ಓದಿ ಸಂಪಾದಿಸಿಕೊಳ್ಳಬೇಕು. ಪ್ರತಿಭಾವಂತರು ಕಠಿಣ ಪರಿಶ್ರಮಪಟ್ಟು ಶಿಕ್ಷಣದಲ್ಲಿ ಒಂದಿಷ್ಟು ಸಾಧನೆ ಮಾಡಿದ್ದೀರಿ. ಇದೀಷ್ಟೆ ನಿಮ್ಮ ಸಾಧನೆ ಆಗಬಾರದು. ಇನ್ನೂ ಹೆಚ್ಚಿನ ಸಾಧನೆ ಮಾಡಲುಮುಂದಾಗಬೇಕು ಎಂದರು.
ದುಡಿಮೆ, ಕುಟುಂಬ ನಿರ್ವಹಣೆಗೆ ಸೀಮಿತರಾದರೆ ಸ್ವಾರ್ಥಿಗಳಾಗುತ್ತಾರೆ. ಆದ್ದರಿಂದ ಪ್ರತಿಯೊಬ್ಬರು ದುಡಿಮೆಯ ಒಂದು ಭಾಗವನ್ನು ಸಮಾಜ ಸೇವೆಗೆ ಮೀಸಲಿಡಬೇಕೆಂದು ಹೇಳಿದರು.
ಪ್ರಸ್ತುತ ದಿನಮಾನಗಳಲ್ಲಿ ವೃದ್ದಾಶ್ರಮಗಳು ಹೆಚ್ಚಾಗುತ್ತಿರುವುದು ವಿಶಾದಕರ ಸಂಗತಿ. ಹಿರಯರಿಗೆ ಗೌರವ ನೀಡುವವ ಸಂಖ್ಯೆ ವಿರಳವಾಗುತ್ತಿದೆ. ತಮ್ಮನ್ನು ಹೆತ್ತುಹೊತ್ತು ಸಾಕಿ ಸಲಹಿದ ಶಿಕ್ಷಣವನ್ನು ಕೊಟ್ಟು ಆದರಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡಿದ ಪೋಷಕರನ್ನು ಅನಾಥಾಲಯಕ್ಕೆ ಬಿಡುವುದು ಅಕ್ಷಮ್ಯ ಅಪರಾಧ ಎಂದರು.
ಆಧುನಿಕ ತಂತ್ರಜ್ಞಾನದ ಭರಾಟೆಯ ಯಾಂತ್ರಿಕ ಜೀವನದಲ್ಲಿ ಮಾನವೀಯ ಸಂಬಂಧಗಳು ಮಾನವೀಯ ಮೌಲ್ಯಗಳು ಮರೆಯಾಗುತ್ತಿವೆ. ನಾವೇಷ್ಟೆ ಉನ್ನತ ಮಟ್ಟಕ್ಕೆ ಹೋದರೂ ನಮ್ಮ ದೇಶದ ಸಂಸ್ಕøತಿ ಸಂಸ್ಕಾರ ಮರೆಯಬಾರದು. ದೇಶದ ಭವ್ಯ ಭವಿಷ್ಯದ ರೂವಾರಿಗಳಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಹಣ ಗಳಿಕೆಯೊಂದೇ ಜೀವನದ ಗುರಿಯಾಗಬಾರದು. ನಿಮ್ಮನ್ನು ಹೆತ್ತವರು, ನಿಮಗೆ ಶಿಕ್ಷಣ ನೀಡಿದ ಶಿಕ್ಷಣ ಸಂಸ್ಥೆಯವರಿಗೆ ಅಮೂಲ್ಯ ರತ್ನಗಳಾಗಬೇಕು ಎನ್ನುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆ ನಿರೀಕ್ಷೆ ಹುಸಿಯಾಗದಿರಲಿ ತಾವುಗಳು ಆ ಮಟ್ಟಕ್ಕೆ ಬೆಳೆದಾಗ ಮಾತ್ರ ಸಂಸ್ಥೆಯ ಪರಿಶ್ರಮ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಟ್ರಸ್ಟಿಗಳಾದ ಸಿ.ಆರ್.ವಿಶ್ವನಾಥ್,ಸಿ.ಆರ್. ಸತ್ಯನಾರಾಯಣ, ಬಿ.ವಿ. ಗಂಗಪ್ಪ ಶ್ರೇಷ್ಠಿ, ಸಿ.ಕೆ. ಪ್ರಶಾಂತ್, ವನಜಾಕ್ಷಮ್ಮ, ಸಿ.ಎಸ್. ಭರತ್, ಜಿ.ಎನ್. ಮೂರ್ತಿ, ಸುಕನ್ಯಕೃಷ್ಣಮೂರ್ತಿ, ಕಲಾಕುಂಚ ಸಂಸ್ಥೆ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ಇತರರಿದ್ದರು.







