‘ರಂಗ್ ರಂಗ್‌ದ ದಿಬ್ಬಣ’ ಸಿನೆಮಾ ಪ್ರದರ್ಶನ ಉದ್ಘಾಟನೆ

ಉಡುಪಿ, ನ.5: ವಾರಿನ್ ಕಂಬೈನ್ಸ್‌ನಡಿ ಶರತ್ ಕೋಟ್ಯಾನ್ ನಿರ್ಮಿಸಿರುವ ರಂಗ್ ರಂಗ್‌ದ ದಿಬ್ಬಣ ತುಳುಚಿತ್ರದ ಪ್ರದರ್ಶನವನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ರವಿವಾರ ಉಡುಪಿಯ ಕಲ್ಪನಾ ಚಿತ್ರಮಂದಿರದಲ್ಲಿ ಉದ್ಘಾಟಿಸಿದರು.
ತುಳುಚಿತ್ರಗಳಿಗೆ ಮಾರುಕಟ್ಟೆ ಇಲ್ಲ ಹಾಗೂ ನೋಡುಗರ ಸಂಖ್ಯೆಯೂ ಕಡಿಮೆ ಇದೆ ಎಂಬ ಅಪವಾದ ಈಗ ಬಿಡುಗಡೆಗೊಳ್ಳುತ್ತಿರುವ ತುಳುಚಿತ್ರಗಳು ಸುಳ್ಳಾಗಿಸಿವೆ. ತುಳುಚಿತ್ರಗಳು ಇತರ ಭಾಷೆಯ ಚಿತ್ರಗಳಿಗೆ ಪೈಪೋಟಿ ನೀಡುವ ರೀತಿಯಲ್ಲಿ ಬಿಡುಗಡೆಯಾಗುತ್ತಿವೆ. ತುಳುನಾಡಿನ ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ ಚಿತ್ರಗಳು ಹೆಚ್ಚೆಚ್ಚು ಮೂಡಿಬರಬೇಕು ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಕಾಪು ಶಾಸಕ ವಿನಯಕುಮಾರ್ ಸೊರಕೆ, ಉಡುಪಿ ನಾದವೈಭವಂ ಉಡುಪಿ ವಾಸುದೇವ ಭಟ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕರೆ, ಬೆಳ್ಳೆ ಸಿ.ಎ. ಬ್ಯಾಂಕ್ ಅಧ್ಯಕ್ಷ ಶಿವಾಜಿ ಸುವರ್ಣ, ಪ್ರೈಮ್ ಟಿವಿ ನಿರ್ದೇಶಕ ರೂಪೇಶ್ ವಿ. ಕಲ್ಮಾಡಿ, ಚಿತ್ರದ ನಿರ್ದೇಶಕ ಕೃಷ್ಣಪ್ರಸಾದ್ ಉಪಸ್ಥಿತರಿದ್ದರು.





