ಸಿಖ್ ಮೇಯರ್ ಅಭ್ಯರ್ಥಿಗೆ ಭಯೋತ್ಪಾದಕನೆಂದು ನಿಂದನೆ

ನ್ಯೂಯಾರ್ಕ್, ನ.5: ಅಮೆರಿಕದ ನ್ಯೂಜೆರ್ಸಿ ಪ್ರಾಂತದಲ್ಲಿ ಮೇಯರ್ ಹುದ್ದೆಗೆ ಸ್ಪರ್ಧಿಸಿದ್ದ ಸಿಖ್ ಸಮುದಾಯದ ರವೀಂದರ್ ಭಲ್ಲಾ ಎಂಬವರನ್ನು ಭಯೋತ್ಪಾದಕ ಎಂದು ನಿಂದಿಸಿದ ಘಟನೆ ನಡೆದಿದೆ. ಶುಕ್ರವಾರ ರಾತ್ರಿ ರವೀಂದರ್ ಭಲ್ಲಾ ಅವರ ವಾಹನದ ಗಾಜಿಗೆ ‘ಭಯೋತ್ಪಾದಕ’ ಎಂದು ಬರೆಯಲಾಗಿದ್ದ ಪತ್ರವನ್ನು ಅಂಟಿಸಲಾಗಿತ್ತು ಎಂದು ನ್ಯೂಯಾರ್ಕ್ ಡೈಲಿ ಪತ್ರಿಕೆ ವರದಿ ಮಾಡಿದೆ. ರವೀಂದರ್ ಭಲ್ಲಾ ಅವರ ಫೋಟೊ ಅಂಟಿಸಿದ ಪತ್ರದಲ್ಲಿ - ನಗರವನ್ನು ನಿಯಂತ್ರಿಸಲು ಭಯೋತ್ಪಾದನೆಗೆ ಆಸ್ಪದ ಕೊಡಬೇಡಿ ಎಂದು ಕೆಂಪಕ್ಷರದಲ್ಲಿ ದೊಡ್ಡದಾಗಿ ಬರೆಯಲಾಗಿತ್ತು.
Next Story





