ಕೊಹ್ಲಿಗೆ 29ನೆ ಹುಟ್ಟು ಹಬ್ಬದ ಸಂಭ್ರಮ

ರಾಜ್‌ಕೋಟ್ ನ.5: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ರವಿವಾರ ತನ್ನ 29ನೆ ಹುಟ್ಟುಹಬ್ಬವನ್ನು ತಂಡದ ಸಹ ಆಟಗಾರರೊಂದಿಗೆ ಆಚರಿಸಿಕೊಂಡರು.
ಕೊಹ್ಲಿ ಅವರಿಗೆ ವಿಶ್ವದ ಅಸಂಖ್ಯಾತ ಅಭಿಮಾನಿಗಳು ಶುಭ ಹಾರೈಸಿದ್ದಾರೆ.
ನ್ಯೂಝಿಲೆಂಡ್ ವಿರುದ್ಧ ಎರಡನೆ ಟ್ವೆಂಟಿ-20 ಪಂದ್ಯದಲ್ಲಿ ಭಾರತ 40 ರನ್‌ಗಳ ಸೋಲು ಅನುಭವಿಸಿದ್ದ ಹಿನ್ನೆಲೆಯಲ್ಲಿ ಅವರಿಗೆ ಹುಟ್ಟು ಹಬ್ಬಕ್ಕೆ ಗೆಲುವಿನ ಉಡುಗೊರೆ ದೊರೆಯಲಿಲ್ಲ.
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್, ಟೀಮ್ ಇಂಡಿಯಾ ಕೋಚ್ ರವಿಶಾಸ್ತ್ರಿ, ಟೀಮ್ ಇಂಡಿಯಾದ ಮಾಜಿ ದಾಂಡಿಗ ವಿವಿಎಸ್ ಲಕ್ಷ್ಮಣ್ ಮತ್ತಿತರರು ಕೊಹ್ಲಿಗೆ ಶುಭ ಹಾರೈಸಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ 202 ಪಂದ್ಯಗಳಲ್ಲಿ 32 ಶತಕಗಳಿರುವ 9,030 ರನ್, ಟೆಸ್ಟ್ ಕ್ರಿಕೆಟ್‌ನಲ್ಲಿ 60 ಪಂದ್ಯಗಳಲ್ಲಿ 17 ಶತಕ ಇರುವ 4,658 ರನ್, 54 ಟ್ವೆಂಟಿ-20 ಪಂದ್ಯಗಳಲ್ಲಿ 18 ಅರ್ಧಶತಕ ಒಳಗೊಂಡ 1,943 ರನ್ ಗಳಿಸಿದ್ದಾರೆ.
ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 9,000 ರನ್‌ಗಳ ಮೈಲುಗಲ್ಲನ್ನು ಮುಟ್ಟಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 49 ರನ್ ಗಳಿಸಿರುವ ಅವರು ಸಚಿನ್ ತೆಂಡುಲ್ಕರ್ ಬಳಿಕ ಗರಿಷ್ಠ ಶತಕ ದಾಖಲಿಸಿದ ವಿಶ್ವದ ಎರಡನೆ ದಾಂಡಿಗ ಎನಿಸಿಕೊಂಡಿದ್ದಾರೆ.







