ಪ್ಯಾರಡೈಸ್ ದಾಖಲೆಯ ಬಗೆಗಿನ ಪ್ರಶ್ನೆಗೆ ಆರ್.ಕೆ. ಸಿನ್ಹಾ ಉತ್ತರಿಸಿದ್ದು ಹೇಗೆ ಗೊತ್ತೇ?
ಬಿಜೆಪಿ ಸಂಸದನ ಪ್ರತಿಕ್ರಿಯೆಗೆ ಪತ್ರಕರ್ತರು ಸುಸ್ತು!

ಹೊಸದಿಲ್ಲಿ,ನ.6 : ಪ್ಯಾರಡೈಸ್ ದಾಖಲೆಯಲ್ಲಿ ಬಿಜೆಪಿ ನಾಯಕ ಹಾಗೂ ರಾಜ್ಯಸಭಾ ಸಂಸದ ರವೀಂದ್ರ ಕಿಶೋರ್ ಸಿನ್ಹಾ ಅವರ ಹೆಸರು ಉಲ್ಲೇಖಗೊಂಡಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಸಿನ್ಹಾ ಬಳಿ ಉತ್ತರವಿರಲಿಲ್ಲ. ತಾವು ಮೌಖಿಕವಾಗಿ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿ ಬಿಟ್ಟರು. ಯಾಕಂತೀರಾ ? ಅವರು ಮೌನವೃತ ಆಚರಿಸುತ್ತಿದ್ದಾರಂತೆ.
ಪತ್ರಕರ್ತರು ಪ್ರಶ್ನೆ ಕೇಳುತ್ತಿದ್ದಂತೆಯೇ ಏನೋ ಸಂಜ್ಞೆ ಮಾಡಿದಂತೆ ಕಂಡ ಸಿನ್ಹಾ ಕೊನೆಗೆ ತನಗೆ ಒಂದು ಕಾಗದದ ಹಾಳೆ ನೀಡುವಂತೆ ಹೇಳಿ ಅದರಲ್ಲಿ ತಾನು ಏಳು ದಿನಗಳ ಕಾಲ ಮೌನವೃತ ಆಚರಿಸುತ್ತಿರುವುದರಿಂದ ಮಾತನಾಡಲು ಸಾಧ್ಯವಿಲ್ಲ ಎಂದರು.
ಆದರೆ ಇಂಡಿಯನ್ ಎಕ್ಸ್‍ಪ್ರೆಸ್ ಕೇಳಿದ ಪ್ರಶ್ನೆಗೆ ತನಗೆ ಪ್ಯಾರಡೈಸ್ ದಾಖಲೆಗಳಲ್ಲಿ ಉಲ್ಲೇಖಗೊಂಡಿರುವ ಎಸ್‍ಐಎಸ್ ಏಷ್ಯ ಪೆಸಿಫಿಕ್ ಹೋಲ್ಡಿಂಗ್ಸ್ ನಲ್ಲಿ ಯಾವುದೇ ನೇರ ಆಸಕ್ತಿಯಿಲ್ಲ ಹಾಗೂ ಎಸ್‍ಐಎಸ್ ಪರವಾಗಿ ತನ್ನ ಬಳಿ ಒಂದು ಶೇರು ಮಾತ್ರ ಇರುವುದಾಗಿ ಅದು ಕೂಡ ವೈಯಕ್ತಿಕ ನೆಲೆಯಲ್ಲಿ ಅಲ್ಲ ಎಂದರು. ತಾನು 2014ರಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿದಾವತ್ ನಲ್ಲಿ ತಾನು ಮೂಲ ಸಂಸ್ಥೆಯ ಬಗ್ಗೆ ಮಾತ್ರ ಉಲ್ಲೇಖಿಸಿದ್ದಾಗಿ ಅವರು ಹೇಳಿದ್ದಾರೆ.
ಸಿನ್ಹಾ ಅವರ ಸೆಕ್ಯುರಿಟಿ ಸರ್ವಿಸ್ ಸಂಸ್ಥೆ ಸೆಕ್ಯುರಿಟಿ ಎಂಡ್ ಇಂಟಲಿಜನ್ಸ್ ಸರ್ವಿಸಸ್ ಎರಡು ಇತರ ಸಂಸ್ಥೆಗಳೊಂದಿಗೆ ನಂಟು ಹೊಂದಿದೆ. ಸಿನ್ಹಾ ಅವರು ಎಸ್‍ಐಎಸ್ ಏಷ್ಯಾ ಪೆಸಿಫಿ ಹೋಲ್ಡಿಂಗ್ಸ್ ಲಿ. ಇದರ ಮೈನಾರಿಟಿ ಶೇರುದಾರರಾಗಿದ್ದರೆ ಅವರ ಪತ್ನಿ ರೀಟಾ ಅವರು ನಿರ್ದೇಶಕಿಯಾಗಿದ್ದಾರೆ. ಸಿನ್ಹಾ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಅಫಿದಾವತ್ ನಲ್ಲಿ ಈ ಬಗ್ಗೆ ಉಲ್ಲೇಖವಿಲ್ಲ.
#WATCH: BJP MP Ravindra Kishore Sinha's reaction on being asked about a news report of his security firm being linked to 2 offshore entities pic.twitter.com/AryNIJdq8h
— ANI (@ANI) November 6, 2017







