ಬೆಂಗ್ರೆಯಲ್ಲಿ ಮನೆ ಮನೆಗೆ ಕಾಂಗ್ರೆಸ್ ಅಭಿಯಾನ

ಮಂಗಳೂರು, ನ. 6: ದಕ್ಷಿಣ ವಿಧಾನಸಭಾ ಕ್ಷೇತ್ರದ ಬೆಂಗ್ರೆ ವಾರ್ಡ್ ಯುವ ಕಾಂಗ್ರೆಸ್ ವತಿಯಿಂದ ಮನೆ ಮನೆಗೆ ಕಾಂಗ್ರೆಸ್ ಅಭಿಯಾನವು ರವಿವಾರ ಬೆಂಗ್ರೆ 60 ನೇ ವಾರ್ಡ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿಲಾಲ್ ಮೊಯ್ದಿನ್ ಅವರ ನೇತೃತ್ವದಲ್ಲಿ ಬೆಂಗ್ರೆ ವಾರ್ಡ್ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಫಯಾಝ್ ಇಬ್ರಾಹಿಂ ಚಾಲನೆ ನೀಡಿದರು.
ಈ ಸಂದರ್ಭ ಅರ್ಹ ಬಡ ಕುಟುಂಬದವರಿಗೆ ಉಚಿತವಾಗಿ ಅಕ್ಕಿಯನ್ನು ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಯುವ ಕಾಂಗ್ರೆಸ್ ಸಕ್ರಿಯ ಕಾರ್ಯಕರ್ತರಾದ ಶೇಖ್ ನಿಸಾರ್ ಸೀದಿ, ಬಿ.ಎಂ. ಮುಸ್ತಫಾ, ಅಸ್ಪರ್ ಹುಸೈನ್, ಶರೀಫ್, ಇಮ್ರಾನ್, ಹಾರೂನ್, ನವಾಝ್, ಇಬ್ರಾಹಿಂ ಹಾಗೂ ಕಡವು ಗೈಸ್ ನ ಯುವಕರು ಈ ಸಂದರ್ಭ ಉಪಸ್ಥಿತರಿದ್ದರು.
Next Story





