Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಪುರುಷರು ಮಹಿಳೆಯರಿಗಿಂತ ಹೆಚ್ಚು ಗೊರಕೆ...

ಪುರುಷರು ಮಹಿಳೆಯರಿಗಿಂತ ಹೆಚ್ಚು ಗೊರಕೆ ಹೊಡೆಯುವುದೇಕೆ?

ವಾರ್ತಾಭಾರತಿವಾರ್ತಾಭಾರತಿ6 Nov 2017 5:21 PM IST
share
ಪುರುಷರು ಮಹಿಳೆಯರಿಗಿಂತ ಹೆಚ್ಚು ಗೊರಕೆ ಹೊಡೆಯುವುದೇಕೆ?

ತಮ್ಮಿಬ್ಬರಲ್ಲಿ ರಾತ್ರಿ ಗೊರಕೆ ಹೊಡೆಯುವರಾರು ಎಂಬ ಬಗ್ಗೆ ಪತಿ-ಪತ್ನಿ ನಡುವೆ ಆಗಾಗ್ಗೆ ಚರ್ಚೆಗಳು ನಡೆಯುತ್ತಿರುತ್ತವೆ. ಆದರೆ ಹೆಚ್ಚು ಗೊರಕೆ ಹೊಡೆಯುವವ ರಾರು .....ಪುರುಷರೋ ಮಹಿಳೆಯರೋ? ಇದಕ್ಕೆ ಉತ್ತರಿಸುವ ಮುನ್ನ ಗೊರಕೆಯೆಂದರೆ ನಿಜಕ್ಕೂ ಏನು ಮತ್ತು ಅದಕ್ಕೆ ಕಾರಣವೇನು ಎನ್ನುವುದನ್ನು ತಿಳಿದುಕೊಳ್ಳೋಣ.

 ಸರಳವಾಗಿ ಹೇಳಬೇಕೆಂದರೆ ಗೊರಕೆ ಎನ್ನುವುದು ವ್ಯಕ್ತಿಯೋರ್ವ ನಿದ್ರೆಯಲ್ಲಿದ್ದಾಗ ಹೊರಡಿಸುವ, ಜೊತೆಯಲ್ಲಿ ಮಲಗಿದವರ ನಿದ್ರೆಯನ್ನು ಹಾಳು ಮಾಡುವ ಕರ್ಕಶ ಶಬ್ದವಾಗಿದೆ. ಇಷ್ಟೇ ಅಲ್ಲ, ಈ ಗೊರಕೆಯ ಸದ್ದು ಮತ್ತು ಅದರ ತೀವ್ರತೆ ರಾತ್ರಿಯಿಡೀ ಬದಲಾಗುತ್ತಿರುತ್ತದೆ. ಕೆಲವೊಮ್ಮೆ ಅದು ತೂತಾದ ಬಲೂನಿನಿಂದ ಹೊರಬೀಳುತ್ತಿರುವ ಗಾಳಿಯ ಶಬ್ದವಿರಬಹುದು, ಏರುರಸ್ತೆಯನ್ನು ಹತ್ತುತ್ತಿರುವ ಲಾರಿಯ ಶಬ್ದವಾಗಿರಬಹುದು ಅಥವಾ ನಿಮ್ಮ ಬೆಡ್‌ರೂಮಿನಿಂದಲೇ ಜಂಬೋ ಜೆಟ್ ವಿಮಾನ ಟೇಕ್‌ಆಫ್ ಆಗುತ್ತಿರುವಾಗಿನ ಕರ್ಕಶ ಶಬ್ದವಾಗಿರಬಹುದು. ಶಬ್ದ ಹೇಗೇ ಇರಲಿ, ಗೊರಕೆ ಅದನ್ನು ಹೊರಡಿಸುತ್ತಿರುವ ವ್ಯಕ್ತಿಯನ್ನು ಬಿಟ್ಟು ಇತರ ಎಲ್ಲರ ನಿದ್ರೆಯನ್ನು ಹಾಳು ಮಾಡುತ್ತದೆ ಎನ್ನುವುದು ಪರಮ ಸತ್ಯ.

ನಾವು ಉಸಿರಾಡುವಾಗ ಗಾಳಿಯು ಒಳಗೆ ಹೊರಗೆ ಹರಿದಾಡುವ ಸಂದರ್ಭದಲ್ಲಿ ನಮ್ಮ ಉಸಿರಾಟ ವ್ಯವಸ್ಥೆಯಲ್ಲಿನ ಕಂಪನಗಳು ಗೊರಕೆಗೆ ಕಾರಣವಾಗುತ್ತವೆ. ವಾಯುನಾಳದಲ್ಲಿ ಎಷ್ಟು ಪ್ರಮಾಣದಲ್ಲಿ ತಡೆಯಾಗಿದೆ ಎನ್ನುವುದನ್ನು ಗೊರಕೆಯ ಶಬ್ದವು ಅವಲಂಬಿಸಿರುತ್ತದೆ. ವಾಯುನಾಳ ಕಿರಿದಾದಷ್ಟೂ ಗೊರಕೆಯ ಸದ್ದು ಹೆಚ್ಚಾಗುತ್ತದೆ.

ಅಂದ ಹಾಗೆ ಈಗ ಮೂಲಪ್ರಶ್ನೆಗೆ ಬಂದರೆ ಪುರುಷರೇ ಮಹಿಳೆಯರಿಗಿಂತ ಹೆಚ್ಚು ಗೊರಕೆ ಹೊಡೆಯುತ್ತಾರೆ ಎನ್ನುವುದು ಉತ್ತರವಾಗುತ್ತದೆ. ಇದಕ್ಕೂ ಕಾರಣವಿದೆ. ನಮ್ಮ ಶರೀರದ ಇತರ ಯಾವುದೇ ಅಂಗದಂತೆ ನಾಲಿಗೆಯೂ ನಾವು ನಿದ್ರೆಯಲ್ಲಿರುವಾಗ ವಿಶ್ರಾಂತಿಯನ್ನು ಪಡೆಯುತ್ತದೆ ಮತ್ತು ವಿಶೇಷವಾಗಿ ನಾವು ಬೆನ್ನಿನ ಮೇಲೆ ಮಲಗಿರುವಾಗ ‘ಒರೊಫ್ಯಾರಿಂಕ್ಸ್’ ಎಂಬ ಜಾಗದಲ್ಲಿ ಬಿದ್ದಿರುತ್ತದೆ. ಈ ಜಾಗವು ಮಹಿಳೆಯರಿಗಿಂತ ಪುರುಷರಲ್ಲಿ ದೊಡ್ಡದಾಗಿರುತ್ತದೆ ಮತ್ತು ವಾಯು ಕಂಪನಕ್ಕೆ ಹೆಚ್ಚಿನ ಅವಕಾಶವನ್ನು ಹೊಂದಿರುತ್ತದೆ. ಇದೇ ಕಾರಣದಿಂದಾಗಿ ಪುರುಷರ ಗೊರಕೆ ಜೋರಾಗಿರುತ್ತದೆ. ಮಹಿಳೆಯರು ಸಣ್ಣ ಕುತ್ತಿಗೆಯನ್ನು ಹೊಂದಿರುತ್ತಾರೆ ಮತ್ತು ನಾಲಿಗೆಯ ಹಿಂದಿನ ಸ್ಥಳವೂ ಸಣ್ಣದಾಗಿರುತ್ತದೆ. ಇದೇ ಕಾರಣದಿಂದ ಅವರ ಗೊರಕೆಯ ಸದ್ದು ಸೌಮ್ಯವಾಗಿರುತ್ತದೆ.

 ಪುರುಷರಲ್ಲಿ ಗೊರಕೆಯನ್ನು ಹೆಚ್ಚಿಸುವ ಇತರ ಕಾರಣಗಳೂ ಇವೆ. ವಯಸ್ಸಾಗುತ್ತಿದ್ದಂತೆ ಸ್ನಾಯು ಬಲ ಕಳೆದುಕೊಳ್ಳುವದು, ಕುತ್ತಿಗೆಯ ಸುತ್ತ ಅತಿಯಾದ ತೂಕ, ದೊಡ್ಡ ಗಾತ್ರದ ಟಾನ್ಸಿಲ್‌ಗಳು, ಮೂಗು ಕಟ್ಟಿಕೊಳ್ಳುವಿಕೆ, ಧೂಮ್ರಪಾನ ಮತ್ತು ಮದ್ಯಪಾನ ಇವೂ ಮಹಿಳೆಯರಿಂತ ಜೋರಾಗಿ ಗೊರಕೆ ಹೊಡೆಯಲು ಪುರುಷರಿಗೆ ತಮ್ಮ ಕೊಡುಗೆ ನೀಡುತ್ತವೆ.

ಇಂದು ಮಾರುಕಟ್ಟೆಗಳಲ್ಲಿ ಗೊರಕೆಯನ್ನು ತಡೆಯಲು ಹಲವಾರು ವಿಲಕ್ಷಣ ಸಾಧನಗಳು ಲಭ್ಯವಿದ್ದು, ತಮಗೆ ಸೂಕ್ತವಾದುದನ್ನು ಆಯ್ದುಕೊಳ್ಳುವುದು ಗೊರಕೆ ಹೊಡೆಯುವವರಿಗೆ ತಲೆನೋವು ತರುತ್ತದೆ. ಆದರೆ ಗೊರಕೆಯನ್ನು ತಡೆಯಲು ಹಲವಾರು ನೈಸರ್ಗಿಕ ಉಪಾಯಗಳಿದ್ದು, ಇವು ಲಾಭಕರ ಎನ್ನುವುದು ಸಿದ್ಧವಾಗಿದೆ.

►ಮಲಗುವ ಮುನ್ನ ಮೂಗು ಕಟ್ಟಿಕೊಂಡಿದ್ದರೆ ಅದನ್ನು ಮೊದಲು ಶುಚಿಗೊಳಿಸಿ

►ಮಲಗಿದಾಗ ನಿಮ್ಮ ತಲೆ ಸುಮಾರು ನಾಲ್ಕು ಇಂಚುಗಳಷ್ಟು ಎತ್ತರದಲ್ಲಿರಲಿ

►ಬೆನ್ನಿನ ಮೇಲೆ ಮಲಗುವ ಬದಲು ಮಗ್ಗುಲಾಗಿ ಮಲಗಿ

►ಹ್ಯುಮಿಡಿಫೈಯರ್ ನೆರವಿನಿಂದ ನಿಮ್ಮ ಮಲಗುವ ಕೋಣೆಯಲ್ಲಿ ತೇವಾಂಶದ ವಾತಾವರಣವಿರುವ ಹಾಗೆ ಮಾಡಿಕೊಳ್ಳಿ

ಇದರೊಂದಿಗೆ ನಿಯಮಿತ ವ್ಯಾಯಾಮ ಮಾಡುವ ಜೊತೆಗೆ ಧೂಮ್ರಪಾನ ಮತ್ತು ಮದ್ಯಪಾನವನ್ನು ವರ್ಜಿಸಿ ಜೀವನ ಶೈಲಿಯನ್ನು ಬದಲಿಸಿಕೊಳ್ಳಿ. ಸ್ವಸಹಾಯ ವಿಧಾನಗಳ ಮೂಲಕವೂ ನಿರೀಕ್ಷಿತ ಫಲಿತಾಂಶ ಸಿಗದಿದ್ದರೆ ನಿರಾಶರಾಗಬೇಡಿ. ಖಂಡಿತವಾಗಿಯೂ ವೈದ್ಯಕೀಯ ಪರಿಹಾರಗಳಿವೆ. ಜನರಲ್ ಫಿಜಿಷಿಯನ್ ಅಥವಾ ಇಎನ್‌ಟಿ ತಜ್ಞರನ್ನು ಸಂಪರ್ಕಿಸಿ. ಅವರು ನಿಮ್ಮ ಗೊರಕೆ ಸಮಸ್ಯೆಗೆ ಸೂಕ್ತ ಪರಿಹಾರವನ್ನು ಸೂಚಿಸಬಲ್ಲರು.

ಆದರೆ ಮಹಿಳೆಯರು ಪುರುಷರಿಗಿಂತ ಹೋರಾಗಿ ಗೊರಕೆ ಹೊಡೆಯುವ ಕೆಲವು ಪ್ರಕರಣಗಳೂ ಇವೆ. ಹೀಗಾಗಿ ಪುರುಷರು ಕೊಂಚ ಸಮಾಧಾನ ಪಟ್ಟುಕೊಳ್ಳಬಹುದಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X