ಆಟೊದಲ್ಲೇ ಚಾಲಕ ಮೃತ್ಯು
ಬೆಂಗಳೂರು, ನ. 6: ಆಟೊ ಚಾಲಕರೊಬ್ಬರು ಕುಳಿತ ಸ್ಥಿತಿಯಲ್ಲೇ ಮೃತಪಟ್ಟಿರುವ ಘಟನೆ ಇಲ್ಲಿನ ರಾಜಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ವೆಸ್ಟ್ ಆಫ್ ಕಾರ್ಡ್ ರಸ್ತೆಯ ನಂದಿನಿ ಪ್ಯಾಲೇಸ್ ಹೊಟೇಲ್ ಬಳಿ ಈ ಘಟನೆ ನಡೆದಿದ್ದು, ಆಟೊ ಚಾಲಕನನ್ನು ಆಸಿಫ್(32) ಎಂದು ಗುರುತಿಸಲಾಗಿದೆ.
ಮೃತ ಆಟೊ ಚಾಲಕನ ಮೈಮೇಲೆ ಯಾವುದೇ ಗಾಯದ ಗುರುತು ಪತ್ತೆಯಾಗಿಲ್ಲ. ಹೀಗಾಗಿ ಹೃದಯಾಘಾತವಾಗಿ ಮೃತಪಟ್ಟಿರುವ ಅನುಮಾನ ವ್ಯಕ್ತವಾಗಿದೆ.
ರವಿವಾರ ರಾತ್ರಿ 11 ಗಂಟೆ ಸುಮಾರಿಗೆ ಪ್ರಯಾಣಿಕರು ಆಟೊ ಬಾಡಿಗೆಗೆ ಕೇಳಲು ಹೋದಾಗ ಆಸೀಫ್ ಕುಳಿತ ಸ್ಥಿತಿಯಲ್ಲೇ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಈ ಸಂಬಂಧ ರಾಜಾಜಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





