ಟಿಪ್ಪು ಜಯಂತಿ ವಿರೋಧಿ ಹೋರಾಟಗಾರನ ಕಾರಿಗೆ ಕಲ್ಲು ತೂರಾಟ: ಆರೋಪ
ಬೆಂಗಳೂರು, ನ.6: ಮೈಸೂರು ಹುಲಿ ಟಿಪ್ಪು ಸುಲ್ತಾನ್ ಜಯಂತಿ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷನ ಕಾರನ್ನು ದುಷ್ಕರ್ಮಿಗಳು ಜಖಂ ಗೊಳಿಸಿರುವ ಘಟನೆ ನೆಲಮಂಗಲದ ಮಾರುತಿ ನಗರದಲ್ಲಿ ನಡೆದಿದೆ.
ಟಿಪ್ಪುಜಯಂತಿ ವಿರೋಧಿಸಿ ಹೋರಾಟಕ್ಕೆ ಮುಂದಾಗಿದ್ದ ರಾಮು ಎಂಬವರಿಗೆ ಸೇರಿದ ಕಾರು ಇದಾಗಿದೆ. ರವಿವಾರ ತಡರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ಸಫಾರಿ ಸ್ಟ್ರೋಮ್ ಕಾರಿನ ಹಿಂಭಾಗದ ಗ್ಲಾಸನ್ನು ಕಲ್ಲಿನಿಂದ ಹೊಡೆದು ಕಿಡಿಗೇಡಿಗಳು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಕರಣ ಸಂಬಂಧ ನೆಲಮಂಗಲ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Next Story





