ಉ.ಕ. ಜಿಲ್ಲಾ ಮಟ್ಟದ ಸೀರತ್ ಪ್ರಬಂಧ ಸ್ಪರ್ಧೆ
ಭಟ್ಕಳ, ನ. 6: ಪ್ರವಾದಿ ಮುಹಮ್ಮದ್ ಪೈಗಂಬರ್ ಜನ್ಮಾದಿನಾಚರಣೆ ಅಂಗವಾಗಿ ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆ ಹಾಗೂ ಅಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ ವತಿಯಿಂದ ಉತ್ತರಕನ್ನಡ ಜಿಲ್ಲಾ ಮಟ್ಟದ ಸೀರತ್ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮುಜಾಹಿದ್ ಮುಸ್ತಫಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಬಂಧ ಸ್ಪರ್ಧೆಯ ವಿಷಯ ಪ್ರವಾದಿ ಮುಹಮ್ಮದ್(ಸ) ಮಾನವತೆಯ ವಕ್ತಾರ ಎಂದಾಗಿದ್ದು ಎ4 ಅಳತೆಯ ನಾಲ್ಕು ಪುಟಗಳಿಗೆ ಸೀಮಿತಗೊಳಿಸಿ, ನ.30 ರೊಳಗೆ ತಲುಪುವಂತೆ ಕಳುಹಿಸಿಕೊಡಬೇಕೆಂದು ತಿಳಿಸಿದ್ದಾರೆ. ಪ್ರಬಂಧದ ಜತೆಗೆ ಇತ್ತಿಚೆಗಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರ, ಸ್ವಂತ ವಿಳಾಸ, ದೂರವಾಣಿ ಸಂಖ್ಯೆ ಹಾಗೂ ಈಮೇಲ್ ವಿಳಾಸವನ್ನು ಕೊಡತಕ್ಕದ್ದು. ಪ್ರಬಂಧಗಳನ್ನು yammarmanvi@gmail.com ಗೆ ಈಮೇಲ್ ಮೂಲಕವೂ ಕಳುಹಿಸಬಹುದಾಗಿದೆ.
ಪ್ರಬಂಧ ಕಳುಹಿಸುವ ವಿಳಾಸ: ಎಂ.ಆರ್.ಮಾನ್ವಿ ಸಂಚಾಲಕರು ಸೀರತ್ ಪ್ರಬಂಧ ಸ್ಪರ್ಧೆ, ಶಮ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಜಾಮಿಯಾಬಾದ್ ರಸ್ತೆ ಭಟ್ಕಳ-581320, ಮೊ. 9886455416 ಗೆ ಕಳುಹಿಸಲು ಕೋರಿದೆ. ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿ ಪತ್ರ ನೀಡಲಾಗುವುದು.
ವಿಜೇತರಿಗೆ ಜಿಲ್ಲಾ ಮಟ್ಟದ ಸೀರತ್ ಸಮಾರಂಭದಲ್ಲಿ ಪ್ರಥಮ, ದ್ವಿತೀಯ, ತೃತಿಯಾ ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ನೀಡಿ ಗೌರವಿಸಲಾಗುವುದು.





