ಎಸ್‌ಡಿಎಯು: ನೂತನ ಪದಾಧಿಕಾರಿಗಳ ಆಯ್ಕೆ

ಬಂಟ್ವಾಳ, ನ.6: ಸೋಶಿಯಲ್ ಡೆಮಕ್ರಟಿಕ್ ಅಟೊ ಯೂನಿಯನ್ (ಎಸ್‌ಡಿಎಯು) ಇದರ ವಾರ್ಷಿಕ ಮಹಾಸಭೆಯು ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ತಲಪಾಡಿಯ ಅಲ್ ಖಝಾನಾ ಸಮುದಾಯ ಭವನದಲ್ಲಿ ನಡೆಯಿತು.
ಇದೇ ವೇಳೆ ನೂತನ ಸಮಿತಿ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು.
ಎಸ್‌ಡಿಎಯುನ ಅಧ್ಯಕ್ಷರಾಗಿ ಯಾಕೂಬ್ ಮದ್ದ, ಉಪಾಧ್ಯಕ್ಷರಾಗಿ ಸಂಶುದ್ದೀನ್, ಕಾರ್ಯದರ್ಶಿಯಾಗಿ ಖಾದರ್ ಫರಂಗಿಪೇಟೆ, ರಶೀದ್, ಜೊತೆ ಕಾರ್ಯದರ್ಶಿಯಾಗಿ ಹಾರಿಸ್, ಸಮಿತಿ ಸದಸ್ಯರಾಗಿ ಇಬ್ರಾಹಿಂ, ನಝೀರ್, ಶರೀಫ್ ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಎಸ್‌ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಅಶ್ರಫ್ ಮಂಚಿ, ಎಸ್‌ಡಿಪಿಐ ಬಂಟ್ವಾಳ ವಿಧಾನ ಸಭಾ ಕ್ಷೇತ್ರಾಧ್ಯಕ್ಷ ಶಾಹುಲ್ ಎಸ್.ಎಚ್., ಎಸ್‌ಡಿಎಯು ಬಂಟ್ವಾಳ ತಾಲೂಕು ಸಂಚಾಲಕ ಖಾದರ್ ಆಲಂಪಾಡಿ, ಎಸ್‌ಡಿಎಯು ಬಂಟ್ವಾಳ ತಾಲೂಕು ಕಾರ್ಯದರ್ಶಿ ಸಂಶುದ್ದೀನ್, ಖಾದರ್ ಫರಂಗಿಪೇಟೆ ಮತ್ತಿತರರು ಉಪಸ್ಥಿತರಿದ್ದರು.
Next Story





