ಉತ್ತರ ಕೊರಿಯ ಕುರಿತ ತಾಳ್ಮೆಯ ಅವಧಿ ಮುಗಿಯಿತು: ಟ್ರಂಪ್

ಟೋಕಿಯೊ, ನ. 6: ಉತ್ತರ ಕೊರಿಯ ಕುರಿತ ‘ವ್ಯೂಹಾತ್ಮಕ ತಾಳ್ಮೆ’ಯ ಅವಧಿ ಮುಗಿದಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಹೇಳಿದ್ದಾರೆ.
ಉತ್ತರ ಕೊರಿಯವನ್ನು ನಿಯಂತ್ರಿಸಲು ಎಲ್ಲ ಆಯ್ಕೆಗಳನ್ನು ಮುಕ್ತವಾಗಿಡುವ ತನ್ನ ನೀತಿಗೆ ಜಪಾನ್ ಬೆಂಬಲ ಸೂಚಿಸಿದ ಬಳಿಕ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.
ಟ್ರಂಪ್ ಜಪಾನ್ ಭೇಟಿಯಲ್ಲಿದ್ದಾರೆ.
ಉತ್ತರ ಕೊರಿಯದ ಪರಮಾಣು ಮಹತ್ವಾಕಾಂಕ್ಷೆಗೆ ರಾಜತಾಂತ್ರಿಕ ಪರಿಹಾರವನ್ನೂ ಮೀರಿದ ಪರಿಹಾರವೊಂದರ ಬಗ್ಗೆ ಅಮೆರಿಕ ಯೋಚಿಸುತ್ತಿದೆ ಎಂಬ ಸೂಚನೆಯನ್ನು ಈ ಹಿಂದೆಯೇ ಟ್ರಂಪ್ ನೀಡಿರುವುದನ್ನು ಸ್ಮರಿಸಬಹುದಾಗಿದೆ.
ಉತ್ತರ ಕೊರಿಯದ ಪರಮಾಣು ಕಾರ್ಯಕ್ರಮವು ನಾಗರಿಕ ಜಗತ್ತು ಮತ್ತು ಅಂತಾರಾಷ್ಟ್ರೀಯ ಶಾಂತಿ ಮತ್ತು ಸ್ಥಿರತೆಗೆ ಬೆದರಿಕೆಯಾಗಿದೆ’’ ಎಂದು ತನ್ನ ಏಶ್ಯ ಪ್ರವಾಸದ ಎರಡನೆ ದಿನದಂದು ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ಹೇಳಿದರು.
Next Story





