ಪುಟಿನ್ ವಿರುದ್ಧ ಪ್ರತಿಭಟಿಸಿದ 412 ಮಂದಿಯ ಬಂಧನ

ಮಾಸ್ಕೊ, ನ. 6: ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವಿರುದ್ಧ ರವಿವಾರ ರಶ್ಯಾದ್ಯಂತ ಪ್ರತಿಭಟನೆ ನಡೆಸಿದ 412 ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ದೇಶಾದ್ಯಂತ ಪ್ರತಿಭಟನೆ ನಡೆಸುವಂತೆ ಪ್ರತಿಪಕ್ಷ ನಾಯಕ ವ್ಯಚೆಸ್ಲಾವ್ ಮಾಲ್ಟ್‌ಸೆವ್ ವೆಬ್‌ಸೈಟ್ ಮೂಲಕ ತನ್ನ ಬೆಂಬಲಿಗರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಲಾಯಿತು.
‘‘ಪುಟಿನ್‌ರ ನಿರಂಕುಶಾಧಿಕಾರವನ್ನು ಕೊನೆಗೊಳಿಸಲು ಜನರ ಕ್ರಾಂತಿಯಾಗಬೇಕು’’ ಎಂಬುದಾಗಿ ಅವರು ಕರೆ ನೀಡಿದ್ದರು.
376 ಮಂದಿಯನ್ನು ಮಾಸ್ಕೊದಲ್ಲಿ ಬಂಧಿಸಲಾಯಿತು ಹಾಗೂ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ 13 ಮಂದಿಯನ್ನು ಬಂಧಿಸಲಾಯಿತು.
Next Story





