ಮೈಸೂರು: ವಿಜೃಂಭಣೆಯಿಂದ ಜರಗಿದ ಕನಕದಾಸ ಜಯಂತಿ ಮೆರವಣಿಗೆ

ಮೈಸೂರು, ನ.6: ಜಿಲ್ಲಾಡಳಿತದ ವತಿಯಿಂದ ಕಲಾಮಂದಿರದಲ್ಲಿ ಆಯೋಜಿಸಿದ್ದ ಕನಕದಾಸ ಜಯಂತಿಯ ಅಂಗವಾಗಿ ವಿವಿಧ ಕಲಾತಂಡಗಳ ಮೆರವಣಿಗೆಗೆ ಗಣ್ಯರು ಸೋಮವಾರ ಚಾಲನೆ ನೀಡಿದರು.
ಭಕ್ತ ಕನಕದಾಸರ ಪ್ರತಿಮೆಯ ಮೆರವಣಿಗೆಯೊಂದಿಗೆ ಕಂಸಾಳೆ ನೃತ್ಯ, ಹುಲಿವೇಷಧಾರಿ, ಗಾರುಡಿ ಗೊಂಬೆ, ಆಂಜನೇಯ ವೇಷಧಾರಿಗಳು ಸೇರಿದಂತೆ ಅನೇಕ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.
ಕಲಾತಂಡದ ಮೆರವಣಿಗೆ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಹೊರಟು, ದೇವರಾಜ ಅರಸು ರಸ್ತೆ, ಮೆಟ್ರೋಪಾಲ್ ವೃತ್ತದ ಮೂಲಕ ಕಲಾಮಂದಿರ ತಲುಪಿತು.
ಈ ಸಂದರ್ಭದಲ್ಲಿ ಶಾಸಕ ಎಂ.ಕೆ.ಸೋಮಶೇಖರ್, ಅರಗು ಮತ್ತು ಬಣ್ಣದ ಕಾರ್ಖಾನೆ ಅಧ್ಯಕ್ಷ ಎಚ್.ಎ.ವೆಂಕಟೇಶ್, ಡಾ.ಯತೀಂದ್ರ ಸಿದ್ದರಾಮಯ್ಯ, ಜಿಲ್ಲಾಧಿಕಾರಿ ಡಿ.ರಂದೀಪ್ ಇತರರು ಉಪಸ್ಥಿತರಿದ್ದರು.
ಡ್ಯಾನ್ಸ್ ಮಾಡಿದ ಶಾಸಕ: ಕನಕದಾಸ ಜಯಂತಿಯ ಕಾರ್ಯಕ್ರಮದ ಮೆರವಣಿಗೆಯಲ್ಲಿ ಶಾಸಕ ಜಿ.ಟಿ. ದೇವೇಗೌಡ ತಮಟೆ ಸದ್ದಿಗೆ ಡ್ಯಾನ್ಸ್ ಮಾಡಿದರು.
ನಗರದ ಅರಮನೆ ಮುಂಭಾಗದ ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗ ಕನಕದಾಸ ಜಯಂತಿಯ ಮೆರವಣಿಗೆ ಉದ್ಘಾಟನೆ ಸಂಧರ್ಭದಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡರು ಮೆರವಣಿಗೆಯಲ್ಲಿ ತಮಟೆಯ ಶಬ್ದಕ್ಕೆ ಸ್ಟೆಪ್ಸ್ ಹಾಕುವ ಮೂಲಕ ಮೆರವಣಿಗೆಗೆ ರಂಗು ತಂದರು.
ಈ ಸಂದರ್ಭದಲ್ಲಿ ಶಾಸಕರ ಕುಣಿತಕ್ಕೆ ಅಕ್ಕಪಕ್ಕದಲ್ಲಿದವರೂ ಕುಣಿದದ್ದು ವಿಶೇಷವಾಗಿತ್ತು.







