ಅಕ್ರಮ ಮರಳುಗಾರಿಕೆಗೆ ದಾಳಿ
ಗಂಗೊಳ್ಳಿ, ನ.6: ಗಂಗೊಳ್ಳಿ ಗ್ರಾಮದ ಮ್ಯಾಂಗನೀಸ್ ರಸ್ತೆಯ ಸಮೀಪ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಗೆ ನ.6ರಂದು ಬೆಳಗ್ಗೆ 11ಗಂಟೆ ಸುಮಾರಿಗೆ ದಾಳಿ ನಡೆಸಿದ ಅಧಿಕಾರಿಗಳ ತಂಡ ಮರಳನ್ನು ವಶಪಡಿಸಿ ಕೊಂಡಿದೆ.
ಗುಡ್ಡೆಕೇರಿಯ ಅಣ್ಣಪ್ಪ ಖಾರ್ವಿ ಎಂಬವರು ಅನಧಿಕೃತವಾಗಿ ಮರಳು ದಕ್ಕೆ ಹಾಗೂ ಕಾರ್ಮಿಕರ ಶೆಡ್ ನಿರ್ಮಿಸಿಕೊಂಡು ಮರಳುಕಾರಿಕೆ ನಡೆಸುತ್ತಿರುವ ಕುರಿತ ಮಾಹಿತಿಯಂತೆ ದಾಳಿ ನಡೆಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ತಂಡ ಒಟ್ಟು 10,979 ರೂ. ಮೌಲ್ಯದ ಮರಳನ್ನು ವಶಪಡಿಸಿಕೊಂಡಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





