ಐಎಂಎ ಅಧ್ಯಕ್ಷರಾಗಿ ಕೆ.ಆರ್.ಕಾಮತ್: ಇಂದು ಅಧಿಕಾರ ಸ್ವೀಕಾರ

ಡಾ.ಕೆ.ಆರ್.ಕಾಮತ್, ಡಾ.ಉಲ್ಲಾಸ್ ಶೆಟ್ಟಿ, ಡಾ.ಸುಚಿತ್ರಾ ಶಣೈ, ಡಾ.ಸಚ್ಚಿದಾನಂದ ರೈ
ಮಂಗಳೂರು, ನ. 6: ರಾಜ್ಯದ ಭಾರತೀಯ ವೈದ್ಯಕೀಯ ಸಂಘಗಳ ಪೈಕಿ ಅತ್ಯಂತ ಹಳೆಯ ಸಂಘಗಳಲ್ಲೊಂದಾದ ಐಎಂಎ ಮಂಗಳೂರು ಶಾಖೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನ.7ರಂದು ನಡೆಯಲಿದೆ.
ಐಎಂಎ ನೂತನ ಅಧ್ಯಕ್ಷರಾಗಿ ಖ್ಯಾತ ವೈದ್ಯ ಡಾ.ಕೆ.ಆರ್.ಕಾಮತ್, ಪ್ರಧಾನ ಕಾರ್ಯದರ್ಶಿಯಾಗಿ ಡಾ.ಉಲ್ಲಾಸ್ ಶೆಟ್ಟಿ, ಖಜಾಂಚಿಯಾಗಿ ಡಾ.ಸುಚಿತ್ರಾ ಶಣೈ ಅಧಿಕಾರ ಸ್ವೀಕರಿಸುವರು. 2018-19ನೆ ಸಾಲಿಗೆ ಡಾ.ಸಚ್ಚಿದಾನಂದ ರೈ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ.
ನಗರದ ಪ್ರಥಮ ಎಂಬಿಬಿಎಸ್ ವೈದ್ಯ ಎನ್ನಲಾದ ಕುಳಾಯಿ ರಾಘವೇಂದ್ರ ಕಿಣಿ 1930ರ ಜೂನ್ 28ರಂದು ದಕ್ಷಿಣ ಕನ್ನಡ ಜಿಲ್ಲಾ ವೈದ್ಯರ ಸಂಘವನ್ನು ಸ್ಥಾಪಿಸಿದ್ದರು. ಆರಂಭಿಕ ದಿನಗಳಲ್ಲಿ ಜಿಲ್ಲಾ ವೈದ್ಯಾಧಿಕಾರಿಗಳೇ ಇದರ ಅಧ್ಯಕ್ಷರಾಗುವಂತೆ ಕೋರಲಾಗಿತ್ತು. ಸಂಘವನ್ನು ಕಟ್ಟಿ ಬೆಳೆಸುವಲ್ಲಿ ಅಪಾರ ಶ್ರಮ ವಹಿಸಿದ್ದ ಕಿಣಿಯವರ ಪ್ರಯತ್ನದಿಂದ 1945ರಲ್ಲಿ ಇದು ಐಎಂಎ ಸಂಘವಾಗಿ ಅಸ್ತಿತ್ವಕ್ಕೆ ಬಂದಿತು.
Next Story





