ಸುನ್ನೀ ಸಂದೇಶದಿಂದ ಮೀಲಾದ್ ವಿಶೇಷ ಸಂಚಿಕೆ ಬಿಡುಗಡೆ

ಮಂಗಳೂರು, ನ.6: ಕರ್ನಾಟಕ ಇಸ್ಲಾಮಿಕ್ ಸಾತ್ಯ ಅಕಾಡಮಿ (ಕಿಸಾ) 16 ವರ್ಷಗಳಿಂದ ಪ್ರತೀ ತಿಂಗಳು ಹೊರತರುವ ಸುನ್ನೀ ಸಂದೇಶ ಮಾಸ ಪತ್ರಿಕೆಯ ಮೀಲಾದ್ ವಿಶೇಷ ಸಂಚಿಕೆಯು ಸೋಮವಾರ ನಗರದ ಕಚೇರಿಯಲ್ಲಿ ಬಿಡುಗಡೆಗೊಂಡಿತು.
ಸುನ್ನೀ ಸಂದೇಶದ ಪ್ರಧಾನ ನಿರ್ದೇಶಕ ಹಾಜಿ ಸಿತಾರ್ ಅಬ್ದುಲ್ ಮಜೀದ್ ಅವರು ಜೆಡಿಎಸ್ ಮುಖಂಡ ಹಾಗೂ ಸಕಲೇಶ್‌ಪುರ ಬದ್ರಿಯಾ ಜುಮಾ ಮಸೀದಿಯ ಮಾಜಿ ಅಧ್ಯಕ್ಷ ಬಿ. ಎಚ್. ಅಬ್ದುಲ್ ಖಾದರ್ ಅವರಿಗೆ ಪ್ರತಿಯನ್ನು ಹಸ್ತಾಂತರಿಸುವ ಮೂಲಕ ಬಿಡುಗಡೆಗೊಳಿಸಿದರು.
ಸಮಾರಂಭದಲ್ಲಿ ದಾರುನ್ನೂರ್ ಫ್ರೊಫೆಸರ್ ಮುಹಿಯುದ್ದೀನ್ ಹುದವಿ ಅಲ್‌ಮಾಲಿಕಿ, ಕೆ. ಎಸ್. ಹೈದರ್ ದಾರಿಮಿ, ಕೆ. ಎಲ್. ಉಮರ್ ದಾರಿಮಿ, ಕುಕ್ಕಿಲ ದಾರಿಮಿ, ಎ. ಎಚ್. ನೌಷಾದ್ ಹಾಜಿ ಸೂರಲ್ಪಾಡಿ, ಮುಸ್ತಫ ಫೈಝಿ ಕಿನ್ಯ, ಎಂ. ಎ. ಅಬ್ದುಲ್ಲಾ ಹಾಜಿ ಬೆಳ್ಮ, ಸಿದ್ದೀಕ್ ಫೈಝಿ ಕರಾಯ, ಬಶೀರ್ ಅಝ್‌ಹರಿ ಬಾಯಾರ್, ದಾವೂದ್ ದಾರಿಮಿ ಬಂಟ್ವಾಳ, ಯಾಕೂಬ್ ಬಾಖವಿ ದೇರಳಕಟ್ಟೆ, ಹಾರಿಸ್ ಬದ್ರಿ ಪಾತೂರ್, ನಾಸಿರ್ ಕೌಸರಿ, ಹುಸೈನ್ ಮೌಲವಿ ಮುಬಾರಕ್, ಕೆ. ಎ. ಮೊದಿನ್ ರಹ್‌ಮಾನಿಯಾ ಹೋಟೇಲ್ ಮೂಡಬಿದ್ರೆ, ಅಹ್ಮದ್ ಕುಂಞಿ ಮುಸ್ಲಿಯಾರ್ ಚಾರ್ಮಾಡಿ, ಅಸೈನಾರ್ ಮುಸ್ಲಿಯಾರ್ ಫರಂಗಿಪೇಟೆ, ಸಿರಾಜ್ ದಾರಿಮಿ ಗುರುಪುರ, ಸಿದ್ಧೀಕ್ ಮೌಲವಿ, ಬಶೀರ್ ಹಾಜಿ, ಹಸನ್ ಮೌಲವಿ ಪರಿಯಕ್ಕಳ, ಸಹದ್ ಕುದ್ರೋಳಿ, ಹಸನ್ ಮಂಗಳೂರು, ಫಕ್ರುದ್ದೀನ್ ಮಂಗಳೂರು, ರಫೀಕ್ ಅಜ್ಜಾವರ, ಜಲೀಲ್ ಅಲ್‌ರು ಬೆಂಗರೆ, ಪಿ.ಜಿ. ಅಬ್ದುಲ್ ಹಮೀದ್ ಮುಸ್ಲಿಯಾರ್ ಬಿ.ಸಿ.ರೋಡ್ ಮೊದಲಾದವರು ಉಪಸ್ಥಿತರಿದ್ದರು.
ಮುಸ್ತಫ ಫೈಝಿ ಸ್ವಾಗತಿಸಿ, ಅಬ್ದುಲ್ಲಾ ಬೆಳ್ಮ ವಂದಿಸಿದರು.





