ಕೆದಕಲ್ ಗ್ರಾಪಂಗೆ 30 ಲಕ್ಷ ರೂ. ಅನುದಾನ: ಶಾಸಕ ಅಪ್ಪಚ್ಚು
ಸುಂಟಿಕೊಪ್ಪ, ನ.6: ಕೆದಕಲ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸರಕಾರದ ವಿಶೇಷ ಪ್ಯಾಕೇಜ್‌ನ ಅಡಿಯಲ್ಲಿ 30 ಲಕ್ಷ ರೂ. ಬಿಡುಗಡೆಯಾಗಿದೆ ಎಂದು ಶಾಸಕ ಅಪ್ಪಚ್ಚು ರಂಜನ್ ಹೇಳಿದ್ದಾರೆ.
ಕೆದಕಲ್, ಹಾಲೇರಿ-ಕಾಂಡನಕೊಲ್ಲಿ, ಮಕ್ಕಂದೂರು ಸಂಪರ್ಕ ರಸ್ತೆ ಸೇರಿದಂತೆ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, 2 ಗ್ರಾಮಗಳಲ್ಲಿ ಕಾಂಕ್ರಿಟ್ ರಸ್ತೆ, 3 ಗ್ರಾಮಗಳಲ್ಲಿ ಡಾಂಬರೀಕರಣ ಕಾಮಗಾರಿ ನಡೆಸಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರಕಾರದ ಅನುದಾನದಲ್ಲಿ ಕೆದಕಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊರೂರು ಭೂತನಕಾಡು ರಸ್ತೆ, ಫಾರೆಸ್ಟ್ ಪ್ಲವರ್ ಹೊರೂರು ರಸ್ತೆ, ಕೆದಕಲ್ ಜೇನುಕಾಡು ರಸ್ತೆ, ಕೆದಕಲ್ ಮಕ್ಕಂದೂರು ರಸ್ತೆ, ಹಾಲೇರಿ ಕಾಂಡನಕೊಲ್ಲಿ ರಸ್ತೆ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಕೆ.ಪಿ. ಚಂದ್ರಕಲಾ, ಗ್ರಾಪಂ ಅಧ್ಯಕ್ಷ ಬಾಲಕೃಷ್ಣ ರೈ, ಸದಸ್ಯರಾದ ವೆಂಕಪ್ಪಕೋಟ್ಯಾನ್, ರಮೇಶ್, ದೇವಿಪ್ರಸಾದ್, ಮಾಜಿ ಅಧ್ಯಕ್ಷ ಸೋಮಯ್ಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ವೀಣಾ, ಕೆದಕಲ್ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ರಮೇಶ್ ರೈ, ಸುಂಟಿಕೊಪ್ಪಗ್ರಾಪಂ ಅಧ್ಯಕ್ಷೆ ರೋಸ್‌ಮೇರಿ ರಾಡ್ರಿಗಸ್, ಸದಸ್ಯರಾದ ಶಿವಮ್ಮ, ನಾಗರತ್ನಾ ಸುರೇಶ್, ಲೋಕೋಪಯೋಗಿ ಅಭಿಯಂತರ ಪೀಟರ್, ಗುತ್ತಿಗೆದಾರ ಸುರೇಶ್‌ಕುಮಾರ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.







