ಕನಕದಾಸರ ತತ್ವಸಿದ್ಧಾಂತ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಆದರ್ಶ ವ್ಯಕ್ತಿಯಾಗಲು ಸಾಧ್ಯ: ನರೇಂದ್ರ

ಕೊಳ್ಳೇಗಾಲ, ನ.6: ಕನಕದಾಸರ ತತ್ವ ಸಿದ್ಧಾಂತಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಆದರ್ಶ ವ್ಯಕ್ತಿಯಾಗಲು ಸಾಧ್ಯವೆಂದು ಹನೂರು ಶಾಸಕ ಆರ್.ನರೇಂದ್ರ ಹೇಳಿದ್ದಾರೆ.
ಪಟ್ಟಣದ ನ್ಯಾಷನಲ್ ಮೈದಾನದಲ್ಲಿ ಸೋಮವಾರ ತಾಲೂಕು ಆಡಳಿತ ವತಿಯಿಂದ ಆಯೋಜಿಸಿದ್ದ 530ನೆ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಅವರು ಮಾತನಾಡಿದರು.
ಕನಕದಾಸ, ಅಂಬೇಡ್ಕರ್, ಬಸವಣ್ಣ ಸೇರಿದಂತೆ ಇನ್ನಿತರ ಮಹಾನ್ ವ್ಯಕ್ತಿಗಳ ತತ್ವಗಳನ್ನು ಮೈಗೂಡಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾಮಾಜಿಕ ಕಳಕಳಿ ಹೊಂದುವ ಮೂಲಕ ಬಡವರ ಪರ ರಾಜ್ಯದಲ್ಲಿ ಅನೇಕ ಯೋಜನೆಗಳನ್ನು ತಂದಿದ್ದಾರೆ. ಕನಕದಾಸರ ಕೃತಿಗಳನ್ನು ಓದಿ ಅರಿತ ಸಿದ್ದರಾಮಯ್ಯನವರು ರಾಜ್ಯದಲ್ಲಿ ಉತ್ತಮವಾಗಿ ಆಡಳಿತ ನಡೆಸುತ್ತಿದ್ದಾರೆ ಆದ್ದರಿಂದಾಗಿ ಇಂದು ರಾಜ್ಯವು ದೇಶದಲ್ಲೇ ನಂ.1 ಸ್ಥಾನದಲ್ಲಿದೆ ಎಂದರು.
ಈ ವೇಳೆ ಮದ್ದೂರು ಸರ್ಕಾರಿ ಶಾಲೆಯ ಕನ್ನಡ ಶಿಕ್ಷಕ ಚನ್ನಲಿಂಗಾನಹಳ್ಳಿ ಬ್ರಹ್ಮಲಿಂಗಗೌಡ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯ ಮುಳ್ಳೂರು ಕಮಲ್, ನಗರಸಭೆ ಅಧ್ಯಕ್ಷ ಶಾಂತರಾಜು, ಉಪಾಧ್ಯಕ್ಷ ನಂಜುಂಡ, ತಾ.ಪಂ ಉಪಾಧ್ಯಕ್ಷೆ ಲತಾರಾಜಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಜವಾದ್ ಅಹಮದ್, ಸದಸ್ಯ ಸಿದ್ದಪ್ಪಾಜಿ, ತಹಶೀಲ್ದಾರ್ ಕಾಮಾಕ್ಷಮ್ಮ, ತಾ.ಪಂ ಇಒ ಡಾ.ಪ್ರಕಾಶ್, ಬಿಒ ಶಿವಲಿಂಗಯ್ಯ, ಡಿವೈಎಸ್‍ಪಿ ಪುಟ್ಟಮಾದಯ್ಯ, ಎಪಿಎಂಸಿ ಅಧ್ಯಕ್ಷ ಸೋಮಣ್ಣ, ವೃತ್ತ ನಿರೀಕ್ಷಕ ಡಿ.ಜಿ.ರಾಜಣ್ಣ, ಕುರುಬರ ಸಂಘದ ಸಿದ್ದೇಗೌಡ, ನಂಜೇಗೌಡ, ಸೋಮಶೇಖರ್ ಇತರರು ಹಾಜರಿದ್ದರು.







