ಜಾಕ್ ಸೋಕ್‌ಗೆ ಪ್ಯಾರಿಸ್ ಮಾಸ್ಟರ್ಸ್ ಕಿರೀಟ

ಪ್ಯಾರಿಸ್, ನ.6: ಅಮೆರಿಕದ ಜಾಕ್ ಸೋಕ್ ಅವರು ಪ್ಯಾರಿಸ್ ಮಾಸ್ಟರ್ಸ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.
ರವಿವಾರ ನಡೆದ ಫೈನಲ್ ಪಂದ್ಯದಲ್ಲಿ ಜಾಕ್ ಸೋಕ್ ಅವರು ಸರ್ಬಿಯಾದ ಫಿಲಿಪ್ ಕ್ರಜಿನೊವಿಕ್ ವಿರುದ್ಧ 5-7, 6-4, 6-1 ಅಂತರದಲ್ಲಿ ಜಯ ಗಳಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. ಇದರೊಂದಿಗೆ ಮೊದಲ ಮಾಸ್ಟರ್ಸ್ ಪ್ರಶಸ್ತಿಯನ್ನು ಬಾಚಿಕೊಂಡರು.
ಈ ಗೆಲುವಿನೊಂದಿಗೆ ಸೋಕ್ ಅವರು ಮುಂದಿನ ವಾರ ನಡೆಯಲಿರುವ ವರ್ಲ್ಡ್ ಟೂರ್ ಫೈನಲ್‌ನಲ್ಲಿ ಅವಕಾಶ ದೃಢಪಡಿಸಿದ್ದಾರೆ. 1999ರಲ್ಲಿ ಆ್ಯಂಡ್ರೆ ಅಗಾಸಿ ಜಯ ಗಳಿಸಿದ ಬಳಿಕ ಸೋಕ್ ಈ ಸಾಧನೆ ಮಾಡಿದ ಅಮೆರಿಕದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.
Next Story





