ಗೋಮಾಂಸ ಮಾರಾಟಕ್ಕೆ ಯತ್ನ: ಇಬ್ಬರ ಬಂಧನ
ಮಡಿಕೇರಿ, ನ.7: ಚೇರಂಬಾಣೆಯಲ್ಲಿ ಗೋಮಾಂಸ ಮಾರಾಟ ಮಾಡಲು ಯತ್ನಿಸುತ್ತಿದ್ದ ಅಸ್ಸಾಂ ಮೂಲದ ಇಬ್ಬರು ವ್ಯಕ್ತಿಗಳನ್ನು ಗ್ರಾಮಸ್ಥರು ಸರೆ ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಮಂಗಳವಾರ ಅಮೀರ್ (28) ಹಾಗೂ ಮೋಹನ್ ಆಲಿ(28) ಎಂಬವರು ಗೋಮಾಂಸ ಮಾರಾಟ ಮಾಡಲು ಚೇರಂಬಾಣೆ ಸಂತೆಗೆ ಬಂದಿದ್ದ ಸಂದರ್ಭ ಗ್ರಾಮಸ್ಥರು ಗಮನಿಸಿ ಇಬ್ಬರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.
ಕೊಟ್ಟಮುಡಿಯಿಂದ ಗೋಮಾಂಸವನ್ನು ತರಲಾಗಿತ್ತು ಎಂದು ವಿಚಾರಣೆ ಸಂದರ್ಭ ಇಬ್ಬರು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಈ ಬಗ್ಗೆ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





