ಪುಲ್ವಾಮದಲ್ಲಿ ಎನ್ ಕೌಂಟರ್: ಮೂವರು ಉಗ್ರರ ಹತ್ಯೆ

ಜಮ್ಮು ಕಾಶ್ಮೀರ, ನ.7: ಜೈಶ್ ಭಯೋತ್ಪಾದಕ ಮೌಲಾನ ಮಸೂದ್ ಅಝರ್ ನ ಸಂಬಂಧಿ ಸೇರಿದಂತೆ ಮೂವರು ಭಯೋತ್ಪಾದಕರು ಎನ್ ಕೌಂಟರ್ ನಲ್ಲಿ ಹತ್ಯೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ನಡೆದ ಕಾರ್ಯಾಚರಣೆಯ ಸಂದರ್ಭ 44 ರಾಷ್ಟ್ರೀಯ ರೈಫಲ್ಸ್ ನ ಸೈನಿಕ ಕೂಡ ಮೃತಪಟ್ಟಿದ್ದಾರೆ.
ಉಗ್ರರು ಅಡಗಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭಿಸಿತ್ತು. ಹತರಾದ ಮೂವರು ಜೈಶ್ ಉಗ್ರರಾಗಿದ್ದಾರೆ. ಅವರಲ್ಲಿ ಇಬ್ಬರು ಪಾಕ್ ಪ್ರಜೆಯಾಗಿದ್ದಾರೆ ಎಂದು ಹಿರಿಯ ಸಿಆರ್ ಪಿಎಫ್ ಅಧಿಕಾರಿ ವಿನಯ್ ಕುಮಾರ್ ಮಾಹಿತಿ ನೀಡಿದ್ದಾರೆ.
Next Story





