ಬ್ರಿಟಿಶ್ ದಂಪತಿಗೆ ಕಿರುಕುಳ: ಇಬ್ಬರ ಬಂಧನ

ಪಂಡಾರಾಕ್ (ಬಿಹಾರ್), ನ. 7: ಬಿಹಾರದ ಪಂಡಾರಾಕ್‌ನಲ್ಲಿ ಬ್ರಿಟಿಶ್ ದಂಪತಿಯ ದರೋಡೆಗೆ ಯತ್ನಿಸಿದ ಹಾಗೂ ಅಸಭ್ಯವಾಗಿ ವರ್ತಿಸಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಗಂಗಾ ನದಿ ದಂಡೆಯಲ್ಲಿ ತಮಗೆ ಕಿರುಕುಳ ನೀಡಲಾಗಿದೆ ಎಂದು ಬ್ರಿಟಿಶ್ ಪ್ರಜೆ ಮ್ಯಾಥ್ಯೂ ಆರೋಪಿಸಿದ್ದಾರೆ.
ಆಯುಧ ಹಾಗೂ ದೊಣ್ಣೆಗಳನ್ನು ಹೊಂದಿದ್ದ ದುಷ್ಕರ್ಮಿಗಳು ದಂಪತಿ ದರೋಡೆಗೆ ಯತ್ನಿಸಿದರು. ಬ್ರಿಟಿಶ್ ದಂಪತಿಗೆ ಸೇರಿದ ವಸ್ತುಗಳು ಇಬ್ಬರು ಆರೋಪಿಗಳಲ್ಲಿ ಪತ್ತೆಯಾಗಿದೆ ಎಂದು ಪಾಟ್ನಾದ ಪೊಲೀಸ್ ಅಧೀಕ್ಷಕ ಮನು ಮಹಾರಾಜ್ ತಿಳಿಸಿದ್ದಾರೆ.
Next Story





