ಮಣಿಪಾಲ, ಬೆಂಗೂರಿನಲ್ಲಿ ‘ಬ್ರಾಂಡ್ ಸ್ಕಾನ್’ ಉತ್ಸವ
ಮಣಿಪಾಲ, ಬೆಂಗಳೂರಿನಲ್ಲಿ 25ನೇ ವರ್ಷದ ಬ್ರಾಂಡ್‌ಸ್ಕಾನ್
ಉಡುಪಿ, ನ.7: ಮಣಿಪಾಲದ ಟಿ.ಎ.ಪೈ ಮ್ಯಾನೇಜ್‌ಮೆಂಟ್ ಇನ್ಸಿಟ್ಯೂಟ್ (ಟ್ಯಾಪ್ಮಿ) ವತಿಯಿಂದ ಈ ಬಾರಿಯ ಬೃಹತ್ ಮಾರುಕಟ್ಟೆ ಸಂಶೋಧನಾ ಉತ್ಸವ ‘ಬ್ರಾಂಡ್ ಸ್ಕಾನ್’ನ್ನು ಮಣಿಪಾಲ ಮತ್ತು ಬೆಂಗಳೂರುಗಳಲ್ಲಿ ಹಮ್ಮಿಕೊಳ್ಳಲಾಗಿದೆ.
ಮಣಿಪಾಲ ಕೆಎಂಸಿಯ ಗ್ರೀನ್ಸ್‌ನಲ್ಲಿ ನ.12ರಂದು ಮತ್ತು ಬೆಂಗಳೂರಿನ ಒರೈನ್ ಮಹಲ್‌ನಲ್ಲಿ ನ.18 ಮತ್ತು 19ರಂದು ಬೆಳಗ್ಗೆ 9ಗಂಟೆಯಿಂದ ಈ ಉತ್ಸವ ನಡೆಯಲಿದೆ. ಈ ಬಾರಿಯ 25ನೆ ವರ್ಷದ ಉತ್ಸವದಲ್ಲಿ ಎರಡು ಕಡೆಗಳಲ್ಲೂ 60ಸಾವಿರಕ್ಕಿಂತಲೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯನ್ನು ಹೊಂದಲಾಗಿದೆ ಎಂದು ಉತ್ಸವ ಸಂಯೋಜಕ ಪ್ರಜ್ವಲ್ ಪ್ರಕಾಶ್ ಸುದ್ದಿಗೋಷ್ಠಿ ಯಲ್ಲಿಂದು ತಿಳಿಸಿದರು.
ಈ ಉತ್ಸವದಲ್ಲಿ ನಡೆಯುವ ‘ಕಿಡ್ಸ್ ಗಾಟ್ ಟ್ಯಾಲೆಂಟ್’ ವಿಭಾಗದಲ್ಲಿ 5-14ವರ್ಷದೊಳಗಿನ ಮಕ್ಕಳಿಗೆ ಹಾಡುಗಾರಿಕೆ, ನೃತ್ಯ, ನಟನೆ, ಛದ್ಮವೇಷ ಸ್ಪರ್ಧೆ ಗಳನ್ನು ಏರ್ಪಡಿಸಲಾಗಿದೆ. ಮನೋರಂಜನಾತ್ಮಕ ಸ್ಪರ್ಧೆಯಾಗಿರುವ ಬೆಚ್ ಡಾಲ್, ನೃತ್ಯ ತಂಡಗಳಿಗಾಗಿ ಬ್ರಾಗ್ ಆನ್ ಸ್ಪರ್ಧೆ, ಬ್ಯಾಂಡ್ ಬಾರಿಸಿ ಹಾಡುವ ಅಪೊಕಲಿಪ್ಸ್ ಸ್ಪರ್ಧೆಯನ್ನು ಕೂಡ ಆಯೋಜಿಸಲಾಗಿದೆ. ಸ್ಪರ್ಧೆಯ ವಿಜೇತರಿಗೆ ಒಟ್ಟು ಎರಡು ಲಕ್ಷ ರೂ. ಮೊತ್ತದ ಬಹುಮಾನಗಳನ್ನು ನೀಡಲಾಗುವುದು.
ಮಣಿಪಾಲ ಬ್ರಾಂಡ್ ಸ್ಕಾನ್‌ನಲ್ಲಿ ರಾಹುಲ್ ಸುಬ್ರಹ್ಮಣ್ಯನ್‌ರ ಲೈವ್ ಹಾಸ್ಯ ಕಾರ್ಯಕ್ರಮ ನಡೆಯಲಿದ್ದು, ನ.12ರಂದು ಮಧ್ಯಾಹ್ನ ಎರಡು ಗಂಟೆಯೊಳಗೆ ಈ ಕಾರ್ಯಕ್ರಮಕ್ಕೆ ಉಚಿತ ಟಿಕೆಟ್‌ನ್ನು ಪಡೆದುಕೊಳ್ಳಬಹುದಾಗಿದೆ ಎಂದು ಅವರು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಸಿದ್ಧಾಂತ್ ಚಾವ್ಲಾ, ರಾಮ್ ಪಂಚಾರ್ಯ ಉಪಸ್ಥಿತರಿದ್ದರು.







