ಪತಿಯೊಂದಿಗೆ ತೆರಳಲು ಆರಿಫಾಗೆ ರಾಜಸ್ಥಾನ ಹೈಕೋರ್ಟ್ ಅನುಮತಿ

ಹೊಸದಿಲ್ಲಿ, ನ. 7: ಸರಕಾರದ ಆಶ್ರಯಧಾಮದಲ್ಲಿ ರುವ 22 ಹರೆಯದ ಆರಿಫಾ ಆಲಿಯಾಸ್ ಪಾಯಲ್ ಸಿಂಘ್ವಿಯನ್ನು ಬಿಡುಗಡೆ ಮಾಡುವಂತೆ ಹಾಗೂ ಪತಿಯೊಂದಿಗೆ ತೆರಳಲು ಅವಕಾಶ ನೀಡಿ ರಾಜಸ್ಥಾನ ಹೈಕೋರ್ಟ್ ಮಂಗಳವಾರ ಆದೇಶಿಸಿದೆ.
ಆದರೆ, ಅವರ ಮತಾಂತರ ಹಾಗೂ ವಿವಾಹ ದಾಖಲೆಗಳ ತನಿಖೆ ಮುಂದುವರಿಯಲಿದೆ ಎಂದು ನ್ಯಾಯಾಲಯ ಹೇಳಿದೆ.
ರಾಜ್ಯ ಸರಕಾರ ಬುಧವಾರ ನೀಡಲಿರುವ ಪ್ರತಿಕ್ರಿಯೆ ಆಧರಿಸಿ ಮತಾಂತರದ ಬಗ್ಗೆ ವಿಚಾರಣೆ ನಡೆಸಲಿದ್ದೇವೆ ಎಂದು ನ್ಯಾಯಮೂರ್ತಿ ಗೋಪಾಲಕೃಷ್ಣ ವ್ಯಾಸ ಹಾಗೂ ಮನೋಜ್ ಕುಮಾರ್ ಗರ್ಗ್ ಅವರನ್ನೊಳಗೊಂಡ ಪೀಠ ಹೇಳಿದೆ.
ನ್ಯಾಯಾಲಯ ಕಳೆದ ವಾರ ಯುವತಿ ಇಸ್ಲಾಂಗೆ ಮತಾಂತರ ಹೊಂದಿರುವ ಬಗ್ಗೆ ಹಾಗೂ ಅಂತರ್‌ಧರ್ಮೀಯ ವಿವಾಹವಾದ ಬಗ್ಗೆ ಪ್ರಶ್ನಿಸಿತ್ತು. ಧಾರ್ಮಿಕ ಮತಾಂತರ ನಿಯಂತ್ರಿಸಲು ರಾಜಸ್ಥಾನ ದಲ್ಲಿ ಯಾವುದಾದರೂ ನಿಯಮಗಳು ಇವೆಯೇ ಎಂದು ಉಚ್ಚ ನ್ಯಾಯಾಲಯ ರಾಜ್ಯ ಸರಕಾರವನ್ನು ಪ್ರಶ್ನಿಸಿತು ಹಾಗೂ ಪ್ರಮಾಣ ಪತ್ರಗಳನ್ನು ಸಲ್ಲಿಸಿ ಜನರು ತಮ್ಮ ಧರ್ಮಗಳನ್ನು ಬದಲಾಯಿಸಿ ಕೊಳ್ಳಬಹುದು ಎಂದು ಅಭಿಪ್ರಾಯಿಸಿತ್ತು.
Next Story





