ನ.8ರಂದು ಬೆಳ್ಮ ರೆಂಜಾಡಿಯಲ್ಲಿ ಸಮಸ್ತ ಮಹಾ ಸಮ್ಮೇಳನ
ಮಂಗಳೂರು, ನ.7: ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಹಾಗೂ ಎಸ್‌ಕೆಎಸ್‌ಎಸ್‌ಎಫ್ ಬೆಳ್ಮ ರೆಂಜಾಡಿ ಶಾಖೆ ವತಿಯಿಂದ ನ.8ರಂದು ಸಂಜೆ 6 ಗಂಟೆಗೆ ಅಬ್ದಲ್ಲಾ ಹಾಜಿಯವರ ಅಧ್ಯಕ್ಷತೆಯಲ್ಲಿ ಸೈಯ್ಯದ್ ಅಮೀರ್ ತಂಙಳ್ ಅವರ ದುವಾದೊಂದಿಗೆ ಸಮಸ್ತ ಮಹಾ ಸಮ್ಮೇಳನ ಹಾಗೂ ಬೃಹತ್ ಮಜ್ಲಿಸುನ್ನೂರ್ ಸಂಗಮ ಬೆಳ್ಮ ರೆಂಜಾಡಿ ಮಸೀದಿ ವಠಾರದಲ್ಲಿ ನಡೆಯಲಿದೆ.
ಸಮಾರಂಭದಲ್ಲಿ ಮಕ್‌ದೂಮಿಯ ಅರೇಬಿಕ್ ಕಾಲೇಜು ಪ್ರಾಂಶುಪಾಲ ಹಾರೂನ್ ಅಹ್ಸನಿ ಕಿನ್ಯ, ಉಳ್ಳಾಲ ಹಿಫ್‌ಳುಲ್ ಕುರ್‌ಆನ್ ಕಾಲೇಜಿನ ಪ್ರಾಂಶುಪಾಲ ಝೈನ್ ಸಖಾಫಿ ಉಳ್ಳಾಲ, ಅಬ್ದುರ್ರಹ್ಮಾನ್ ದಾರಿಮಿ ತಬೂಕ್, ಕುಕ್ಕಿಲ ಅಬ್ದುಲ್ ಖಾದರ್ ದಾರಿಮಿ, ಸುನ್ನೀ ಸಂದೇಶ ಸಂಪಾದಕ ಹಾಜಿ ಕೆ. ಎಸ್. ಹೈದರ್ ದಾರಿಮಿ, ಹಾಫಿಳ್ ನಯೀಮಿ ಬೆಳ್ಮ, ಬದ್ರುದ್ದೀನ್ ತಂಙಳ್ ಮಂಜೇಶ್ವರ, ಆದಂ ಫೈಝಿ, ಶಮೀಮ್ ಸಖಾಫಿ ಉಳ್ಳಾಲ ಭಾಗವಹಿಸಲಿದ್ದಾರೆ ಎಂದು ಸಮಿತಿ ಅಧ್ಯಕ್ಷ ಅಬ್ದುಲ್ಲಾ ಹಾಜಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





