ಕುಂದಾಪುರ: ಕಟ್ಟಡ ಕಾರ್ಮಿಕರ ವಾರ್ಷಿಕ ಮಹಾಸಭೆ

ಕುಂದಾಪುರ, ನ.7: ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ 11ನೆ ವಾರ್ಷಿಕ ಮಹಾಸಭೆಯು ಕುಂದಾಪುರ ಹೆಂಚು ಕಾರ್ಮಿಕ ಭವನದಲ್ಲಿ ಸೋಮವಾರ ಜರಗಿತು.
ಮುಖ್ಯ ಅತಿಥಿಯಾಗಿ ಕೆ.ಪ್ರಕಾಶ್ ಮಾತನಾಡಿ ಮೋದಿ ಸರಕಾರ ಮತ್ತು ರಾಜ್ಯ ಸರಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿದರು. ಕಾರ್ಮಿಕ ಮುಖಂಡ ಎಚ್.ನರಸಿಂಹ ಮಾತನಾಡಿದರು.
ಕಟ್ಟಡ ಕಾರ್ಮಿಕರ ಸೆಸ್ ಜಿಎಸ್‌ಟಿಗೆ ಒಳಪಡಿಸುವುದು, ರಾಜ್ಯ ಸರಕಾರದ ಮರಳು ನೀತಿ ವಿಳಂಬ ವಿರುದ್ಧ ಮತ್ತು ಕಲ್ಯಾಣ ಮಂಡಳಿಯ ಸೆಸ್ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಸುವುದನ್ನು ವಿರೋಧಿಸಿ ನ.16ರಂದು ಕಲ್ಯಾಣ ಮಂಡಳಿ ಎದುರು ನಡೆಯುವ ಅನಿರ್ದಿಷ್ಟಾವಧಿ ಧರಣಿಗೆ ಬೆಂಬಲಿಸಿ ಭಾಗವಹಿಸುವ ನಿರ್ಣಯವನ್ನು ಕೈಗೊಳ್ಳಲಾಯಿತು. ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ವರದಿ ಮಂಡಿಸಿದರು.
ಈ ಸಂದರ್ಭದಲ್ಲಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಯು.ದಾಸಭಂಡಾರಿ, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಕಲ್ಲಾಗರ ಉಪಾಧ್ಯಕ್ಷರಾಗಿ ರಾಜೀವ ಪಡುಕೋಣೆ, ಶ್ರೀನಿವಾಸ ಪೂಜಾರಿ, ರಾಮಚಂದ್ರ ನಾವಡ, ಜನಾರ್ದನ ಆಚಾರ್, ಸಂತೋಷ ಹೆಮ್ಮಾಡಿ, ಚಿಕ್ಕ ಮೊಗವೀರ, ಗಣೇಶ ತೊಂಡೆಮಕ್ಕಿ, ಕಾರ್ಯದರ್ಶಿಗಳಾಗಿ ರಮೇಶ್ ಪೂಜಾರಿ ಗುಲ್ವಾಡಿ, ಅಲೆಕ್ಸ್, ಅರುಣ್ ಕುಮಾರ್, ಗಣೇಶ್ ಮೊಗವೀರ, ವಿಜೇಂದ್ರ ಕೋಣಿ, ಸತೀಶ್ ತೆಕ್ಕಟ್ಟೆ, ಶ್ರೀಧರ ಉಪ್ಪುಂದ, ಸುಧಾಕರ ಕುಂಭಾಶಿ, ಪ್ರಶಾಂತ್ ಕಾಳಾವರ, ಕೋಶಾಧಿಕಾರಿಯಾಗಿ ಜಗದೀಶ್ ಆಚಾರ್ ಆಯ್ಕೆಯಾದರು.







