Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಪ್ಯಾರಡೈಸ್ ಪೇಪರ್ಸ್ ಸೋರಿಕೆ: ವಂಚಕರ...

ಪ್ಯಾರಡೈಸ್ ಪೇಪರ್ಸ್ ಸೋರಿಕೆ: ವಂಚಕರ ಪಟ್ಟಿಯಲ್ಲಿ ಭಾರತೀಯ ಮಾಧ್ಯಮಗಳೂ ಶಾಮೀಲು

ವಾರ್ತಾಭಾರತಿವಾರ್ತಾಭಾರತಿ7 Nov 2017 10:29 PM IST
share
ಪ್ಯಾರಡೈಸ್ ಪೇಪರ್ಸ್ ಸೋರಿಕೆ: ವಂಚಕರ ಪಟ್ಟಿಯಲ್ಲಿ ಭಾರತೀಯ ಮಾಧ್ಯಮಗಳೂ ಶಾಮೀಲು

 ಹೊಸದಿಲ್ಲಿ, ನ.7: ಪ್ಯಾರಡೈಸ್ ಪೇಪರ್ಸ್ ಸೋರಿಕೆಯಲ್ಲಿ ಹಲವು ಸಾಗರೋತ್ತರ ಕಂಪೆನಿಗಳ ಹೆಸರುಗಳನ್ನು ಬಯಲು ಮಾಡಿದ ನಂತರ ಇದೀಗ ಈ ವರದಿಯಲ್ಲಿ ಕೆಲವು ಭಾರತೀಯ ಮಾಧ್ಯಮಗಳ ಸಂಸ್ಥೆಗಳ ಹೆಸರೂ ಕಾಣಿಸಿಕೊಳ್ಳುತ್ತಿವೆ.

ಈ ವಂಚನಾ ಜಾಲದಲ್ಲಿ ನೆಟ್‌ವರ್ಕ್ 18 ಸೇರಿದಂತೆ ಹಿಂದೂಸ್ಥಾನ್ ಟೈಮ್ಸ್ ಗ್ರೂಪ್ ಮತ್ತು ಝೀ ಮೀಡಿಯಾ ಗ್ರೂಪ್ ಹೆಸರುಗಳು ಕೂಡಾ ಶಾಮೀಲಾಗಿವೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ತನಿಖೆಯಲ್ಲಿ ಬಯಲಾಗಿದೆ.

ಇಂಡಿಯನ್ ಎಕ್ಸ್‌ಪ್ರೆಸ್ ಆ್ಯಪಲ್‌ಬೈಯಿಂದ ಪಡೆದುಕೊಂಡಿರುವ ಮಾಹಿತಿಯಂತೆ, ಹಿಂದೂಸ್ಥಾನ್ ಟೈಮ್ಸ್ ಗ್ರೂಪ್ (ಎಚ್‌ಟಿ ಗ್ರೂಪ್) ಎಚ್‌ಟಿಬಿಸಿ ಲಿಮಿಟೆಡ್ ಮೂಲಕ ಗೊ4ಐ.ಕಾಮ್ (ಬರ್ಮುಡಾ) ಎಂಬ ಸಂಸ್ಥೆಯನ್ನು ಹುಟ್ಟುಹಾಕಿತ್ತು. ಈ ಸಂಸ್ಥೆಯ ಮೂರು ಪಾಲುದಾರರಲ್ಲಿ ಎಚ್‌ಟಿಬಿಸಿ ಕೂಡಾ ಒಂದಾಗಿತ್ತು.

ಕೇಮನ್ ಐಲ್ಯಾಂಡ್‌ನಲ್ಲಿರುವ ಸ್ವಾಮಿನ್ ಇನ್ವೆಸ್ಟ್‌ಮೆಂಟ್ಸ್ ಮತ್ತು ಬರ್ಮುಡಾ ಮೂಲದ ಇಂಡೋಸಿಯನ್ ಇಂಟರ್ನೆಟ್ ಹೋಲ್ಡಿಂಗ್ಸ್ ಇತರ ಎರಡು ಪಾಲುದಾರ ಸಂಸ್ಥೆಗಳಾಗಿವೆ. 2003-04ರ ಎಚ್‌ಟಿ ಗ್ರೂಪ್‌ನ ವಾರ್ಷಿಕ ವರದಿಯಲ್ಲಿ ಗೊ4ಐ.ಕಾಮ್ (ಬರ್ಮುಡಾ)ವನ್ನು ಅಂಗಸಂಸ್ಥೆಯೆಂದು ಉಲ್ಲೇಖಿಸಿದ್ದರೂ ಅದರಲ್ಲಿ ಪಾಲುದಾರಿಕೆಯಿರುವ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿರಲಿಲ್ಲ.

 2003-04ರಲ್ಲಿ ಗೊ4ಐ.ಕಾಮ್ ಸಂಸ್ಥೆ ನಷ್ಟ ಅನುಭವಿಸಿತ್ತು ಎಂದು ಪ್ರಧಾನ ಸಂಸ್ಥೆ ಹಿಂದೂಸ್ಥಾನ್ ಟೈಮ್ಸ್ ಲಿಮಿಟೆಡ್ ತಿಳಿಸಿತ್ತು. ಆದರೆ ಸಂಸ್ಥೆ ಯಾವ ರೀತಿಯ ವ್ಯವಹಾರದಲ್ಲಿ ತೊಡಗಿದೆ ಮತ್ತು ಆ ವರ್ಷ ಸಂಸ್ಥೆಯ ಆದಾಯದ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿರಲಿಲ್ಲ.

ಅದಕ್ಕೂ ಹೆಚ್ಚಾಗಿ ಕಂಪೆನಿಗಳ ನೋಂದಾಣಿ ಪಟ್ಟಿಯಲ್ಲಿ 2004ರ ನಂತರ ಬರ್ಮುಡಾ ಮೂಲದ ಗೋ4ಐ.ಕಾಮ್ ಬಗ್ಗೆ ಯವುದೇ ಉಲ್ಲೇಖವಿರಲಿಲ್ಲ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಎಚ್‌ಟಿ ಗ್ರೂಪ್‌ನ ಮುಖ್ಯಸ್ಥೆ ಶೋಭನಾ ಭಾರ್ತಿಯ ಮತ್ತಾಕೆಯ ಮಗ ಪ್ರಿಯವ್ರತ್ ಗೊ4ಐ.ಕಾಮ್ ಸಂಸ್ಥೆಯ ನಿರ್ದೇಶಕರು ಎಂದು ತಿಳಿದುಬಂದಿದ್ದು ಇವರು ಎಚ್‌ಟಿಬಿಸಿ ಲಿಮಿಟೆಡ್‌ನ ಕೂಡಾ ನಿರ್ದೇಶಕರಾಗಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶೋಭನಾ ಭಾರ್ತಿಯ ಗೊ4ಐ.ಕಾಮ್ (ಬರ್ಮುಡಾ ಎಚ್‌ಟಿ ಲಿಮಿಟೆಡ್‌ನ ಅಂಗಸಂಸ್ಥೆಯಾಗಿದ್ದು ಅಂತರ್ಜಾಲ ಮತ್ತು ಅದಕ್ಕೆ ಸಂಬಂಧಿತ ವ್ಯವಹಾರವನ್ನು ನೋಡಿಕೊಳ್ಳಲು ರಚಿಸಲಾಗಿತ್ತು ಎಂದು ತಿಳಿಸಿದ್ದಾರೆ.

ಈ ಸಂಸ್ಥೆಯನ್ನು ಎಲ್ಲಾ ಅಗತ್ಯ ಅನುಮತಿಗಳನ್ನು ಪಡೆದ ನಂತರವೇ ತೆರೆಯಲಾಗಿದೆ ಎಂದು ಹೇಳಿರುವ ಅವರು 2004ರಲ್ಲಿ ಅದನ್ನು ಮುಚ್ಚಲಾಯಿತು ಎಂದು ಸ್ಪಷ್ಟಪಡಿಸಿದ್ದಾರೆ.

  ಇನ್ನು ಪಟ್ಟಿಯಲ್ಲಿರುವ ಇನ್ನೊಂದು ಮಾದ್ಯಮ ಸಂಸ್ಥೆ ಎಸ್ಸೆಲ್ ಗ್ರೂಪ್ ತನ್ನ ಅಂಗಸಂಸ್ಥೆ ವೆರಿಯಾ ಲೈಫ್‌ಸ್ಟೈಲ್‌ನಿಂದ ಉಂಟಾದ ಸಾಲವನ್ನು ಮರುಪಾವತಿಸಲು ಲೋನ್‌ಗಳ ಸರಪಣಿಯನ್ನು ರಚಿಸಿದೆ ಎಂದು ಪ್ಯಾರಡೈಸ್ ಪೇಪಸ್ನ್‌ಲ್ಲಿ ತಿಳಿಸಲಾಗಿದೆ ಎಂದು ಎಕ್ಸ್‌ಪ್ರೆಸ್ ಬಹಿರಂಗಪಡಿಸಿದೆ.

ಆ್ಯಪಲ್‌ಬೈ ದಾಖಲೆಗಳಂತೆ 62 ಮಿಲಿಯನ್ ಡಾಲರ್‌ನಷ್ಟು ಲೋನ್ ಮೊತ್ತವನ್ನು ಝೀ ಎಂಟರ್‌ಟೈನ್ಮೆಂಟ್ ಎಂಟರ್‌ಪ್ರೈಸಸ್‌ನ ಪ್ರೋತ್ಸಾಹ ಶೇರ್‌ಗಳ ಪರೋಕ್ಷ ನೆರವಿನಿಂದ ಪಡೆಯಲಾಗಿತ್ತು. ಕ್ರೆಡಿಟ್ ಸೂಸ್‌ನಿಂದ ಈ ಸಾಲವನ್ನು ಅದಾಗಲೇ ಇದ್ದ ಸಾಗರೋತ್ತರ ಪ್ರೋತ್ಸಾಹಕ ಸಾಲವನ್ನು ಮರುಪಾವತಿಸುವ ಸಲುವಾಗಿ 2013ರಲ್ಲಿ ಪಡೆಯಲಾಗಿತ್ತು.

ಸಾಗರದಾಚೆಗಿನ ಒಂದು ಸಂಸ್ಥೆಗೆ ಸಾಲ ನೀಡಿದ್ದು ಅದು ಇನ್ನೊಂದು ಸಾರಗೋತ್ತರ ಕಂಪೆನಿಯ ಮೂಲಕ ವ್ಯವಹಾರ ನಡೆಸುತ್ತಿತ್ತು. ಈ ರೀತಿಯಲ್ಲಿ ವ್ಯವಹಾರಗಳ ಸಂಕೀರ್ಣ ಜಾಲವನ್ನೇ ಸೃಷ್ಟಿ ಮಾಡಲಾಗಿತ್ತು.

ಈ ಬಗ್ಗೆ ಎಸ್ಸೆಲ್ ಗ್ರೂಪ್‌ನ ಸುಭಾಷ್ ಚಂದ್ರ ಅವರನ್ನು ಎಕ್ಸ್‌ಪ್ರೆಸ್ ತಂಡ ಭೇಟಿಯಾಗಲು ಯತ್ನಿಸಿದಾಗ ಅವರು ಝೀ ಸಂಸ್ಥೆಯಲ್ಲಿ ಕಾರ್ಯಕಾರೇತರ ಮುಖ್ಯಸ್ಥರ ಸ್ಥಾನವನ್ನು ಹೊರತುಪಡಿಸಿ ಇತರ ಯಾವುದೇ ಸ್ಥಾನವನ್ನು ಹೊಂದಿಲ್ಲ ಎಂದು ಅವರ ಕಚೇರಿಯಿಂದ ತಿಳಿದುಬಂದಿದೆ.

ಈ ಸಂಸ್ಥೆಯ ಎಲ್ಲಾ ಚಟುವಟಿಕೆಗಳು ಭಾರತ ಸೆರಿದಂತೆ ಎಲ್ಲಾ ಕಾನೂನು ಪರಿಧಿಯೊಳಗೇ ನಡೆದಿರುವುದಾಗಿ ಸಂಸ್ಥೆ ತಿಳಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X