ಗಾಂಜಾ ಸೇವನೆ: ಇಬ್ಬರ ಬಂಧನ
ಮಂಗಳೂರು, ನ. 7: ನಗರದ ದಂಬೇಲ್ ನದಿ ಕಿನಾರೆಯ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಇಬ್ಬರು ಯುವಕರನ್ನು ಮಂಗಳೂರು ಕೇಂದ್ರ ಉಪವಿಭಾಗದ ರೌಡಿ ನಿಗ್ರಹ ದಳದ ಪೊಲೀಸರು ಹಾಗೂ ಉರ್ವ ಠಾಣಾ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಬಂಧಿತರನ್ನು ಸ್ಥಳೀಯ ನಿವಾಸಿಗಳಾದ ಅಭಿಷೇಕ್ (22), ರಕ್ಷಿತ್ (18) ಎಂದು ಗುರುತಿಸಲಾಗಿದೆ.
ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಕೇಂದ್ರ ಉಪವಿಭಾಗದ ಎಸಿಪಿ ಉದಯ ನಾಯಕ್ ಮಾರ್ಗದರ್ಶನದಲ್ಲಿ ರೌಡಿ ನಿಗ್ರಹ ದಳದ ಪೊಲೀಸ್ ನಿರೀಕ್ಷಕ ರವೀಶ್ ನಾಯಕ್, ಸಿಬ್ಬಂದಿಗಳಾದ ಕೃಷ್ಣ ಬಿ., ಬಾಲಕೃಷ್ಣ, ದಾಮೋದರ್, ಸಂತೋಷ್ ಕುಮಾರ್ ಸಸಿಹಿತ್ಲು, ನವೀನ್, ಸಿದ್ದಾರ್ಥ, ದಯಾನಂದ, ಕಿಶೋರ್ ಕೋಟ್ಯಾನ್, ಗಣೇಶ್, ಸಂತೋಷ್, ಲೋಕೇಶ್, ಪ್ರಮೋದ್, ವಿನೋದ್, ಯೋಗೀಶ್, ಕಾಂತರಾಜು, ಹೇಮಂತ್ ಕುಮಾರ್, ಶಂಕರಪ್ಪ ಲಮಾಣಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
Next Story





