ಮನೆಗಳ್ಳತ ಪ್ರಕರಣ: ಆರೋಪಿಗಳ ಬಂಧನ

ದಾವಣಗೆರೆ, ನ.7: ನಗರದ ವಿವಿಧಡೆ ಮನೆಗಳ್ಳತನ ಮಾಡುತ್ತಿದ್ದ ನಾಲ್ವರ ಆರೋಪಿಗಳನ್ನು ಬಂಧಿಸಿ ಅವರಿಂದ 11 ಲಕ್ಷ ಮೌಲ್ಯದ ಚಿನ್ನಾಭರಣಗಳು ಮತ್ತು ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಡಾ.ಭೀಮಾಶಂಕರ ಗುಳ್ಳೇದ್ ತಿಳಿಸಿದ್ದಾರೆ.
ಒಟ್ಟು 4 ಪ್ರಕರಣಗಳಲ್ಲಿ ಭಾಗಿಯಾಗಿರುವ ಸೋಮು, ಮೋಹನ್ ರೊಣ್, ನಾಗರಾಜ ರೊಣ್, ಸುರೇಶ್ ಅರಿಣಿ ಶಿಕಾರಿ ಬಂಧಿತ ಆರೋಪಿಗಳು. ಅಲ್ಲದೇ ಇವರಿಂದ ಕಳವು ಮಾಲು ಸ್ವೀಕರಿಸಿದ ಸಯಾಜಿ ಎಸ್ ಮಾನೆ ಬಂಧಿಸಲಾಗಿದೆ ಎಂದು ಮಂಗಳವಾರ ಇಲ್ಲಿನ ಕೆಟೆಜೆ ನಗರ ಪೊಲೀಸ್ ಠಾಣೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
405 ಗ್ರಾಂ ಬಂಗಾರದ ಒಡವೆಗಳು, 1400 ಗ್ರಾಂ ಬೆಳ್ಳಿ ಸಾಮಾನುಗಳು, ಎಲ್ ಇಡಿ ಟಿವಿ, ಡಿವಿಡಿ ಪ್ಲೇಯರ್ ಮತ್ತು 01 ಮೊಬೈಲ್ ಪೋನ್ ಇವುಗಳನ್ನು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಹುಬ್ಬಳ್ಳಿಯವರಾದ ಇವರು ಸುಮಾರು ತಿಂಗಳುಗಳಿಂದ ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ನಗರಗಳಲ್ಲಿ ಬೀಗ ಹಾಕಿದ ಮನೆಗಳನ್ನು ಹುಡುಕಿಕೊಂಡು ರಾತ್ರಿ ವೇಳೆ ರಾಡ್ ನಿಂದ ಬೀಗ ಹೊಡೆದು ಬಂಗಾರದ ಒಡವೆಗಳು, ಬೆಳ್ಳಿ ಸಾಮಾನುಗಳು ಮತ್ತು ನಗದು ಹಣ ಹಾಗೂ ಇತರೆ ವಸ್ತುಗಳನ್ನು ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.
ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ.ಭೀಮಾಶಂಕರ ಎಸ್. ಗುಳ್ಳೇದ್ ಇದೇ ವೇಳೆ ಶ್ಲಾಘಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಎಂ.ಬಾಬು ಮತ್ತು ಕೇಂದ್ರ ವೃತ್ತ ನಿರೀಕ್ಷಕ .ಇ.ಆನಚಿದ್, ಕೆಟಿಜೆ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ, ಟಿ.ರಾಜು, ಪಿ.ಎಸ್.ಐ. ಶ್ರೀಮತಿ. ಪಾರ್ವತಿ ಬಾಯಿ ಸ್ಭೆರಿದಂತೆ ಇತರರು ಇತರರಿದ್ದರು.







