ಬಸವರಾಜ ಹೊರಟ್ಟಿಗೆ ಜೀವಬೆದರಿಕೆ ಪತ್ರ?

ಹುಬ್ಬಳ್ಳಿ, ನ.7: ವಿಧಾನ ಪರಿಷತ್ತಿನ ಹಿರಿಯ ಸದಸ್ಯ ಹಾಗೂ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಸಮಿತಿಯ ಮುಖಂಡ ಬಸವರಾಜ ಹೊರಟ್ಟಿಗೆ ಅನಾಮಧೇಯ ಜೀವ ಬೆದರಿಕೆ ಪತ್ರ ಬಂದಿದ್ದು, ಇನ್ನೆರಡು ದಿನಗಳಲ್ಲಿ ಗುಂಡಿಕ್ಕಿ ಕೊಲ್ಲುವುದಾಗಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.
ಮುಂಬೈಯಿಂದ ಐದು ಜನರ ತಂಡ ಈಗಾಗಲೆ ಹುಬ್ಬಳ್ಳಿಗೆ ಬಂದಿಳಿದಿದೆ. ಎರಡು ದಿನಗಳಲ್ಲಿ ಶಾರ್ಪ್ ಶೂಟರ್‌ಗಳು ನಿಮಗೆ ಗುಂಡಿಕ್ಕಿ ಕೊಲೆ ಮಾಡಲಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.
ಈ ಅನಾಮಧೇಯ ಪತ್ರವನ್ನು ಬಸವರಾಜ ಹೊರಟ್ಟಿ ಕಚೇರಿಯ ಸಿಬ್ಬಂದಿ ಡಿಸಿಪಿ ಮಲ್ಲಿಕಾರ್ಜುನ್ ನ್ಯಾಮಗೌಡ ಅವರಿಗೆ ಹಸ್ತಾಂತರ ಮಾಡಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ ಎಂದು ಹೇಳಲಾಗಿದೆ.
Next Story





