ಪ್ರಣಯ್ ಪುರುಷರ ಸಿಂಗಲ್ಸ್ ಚಾಂಪಿಯನ್
ಸೀನಿಯರ್ ನ್ಯಾಶನಲ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್
ನಾಗ್ಪುರ, ನ.8: ವಿಶ್ವದ ನಂ.2ನೆ ಆಟಗಾರ ಕಿಡಂಬಿ ಶ್ರೀಕಾಂತ್ರನ್ನು ಮಣಿಸಿದ ವಿಶ್ವದ ನಂ.11ನೆ ಆಟಗಾರ ಎಚ್.ಎಸ್. ಪ್ರಣಯ್ ಸೀನಿಯರ್ ನ್ಯಾಶನಲ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಮೊದಲ ಬಾರಿ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.
ಬುಧವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಪ್ರಣಯ್ ತಮ್ಮದೇ ದೇಶದ ಅಗ್ರ ಶ್ರೇಯಾಂಕದ ಆಟಗಾರ ಶ್ರೀಕಾಂತ್ರನ್ನು 21-15, 16-21, 21-7 ಗೇಮ್ಗಳಿಂದ ಮಣಿಸಿದರು.
ಫ್ರೆಂಚ್ ಓಪನ್ ಸೂಪರ್ ಸರಣಿಯ ಸೆಮಿ ಫೈನಲ್ ಸ್ಪರ್ಧೆಯಂತೆಯೇ ಪ್ರಣಯ್ ಮೊದಲ ಗೇಮ್ನ್ನು 21-15 ರಿಂದ ಗೆದ್ದುಕೊಂಡರು. ಎರಡನೆ ಗೇಮ್ನ್ನು 21-16 ರಿಂದ ಗೆದ್ದುಕೊಂಡಿರುವ ಶ್ರೀಕಾಂತ್ ಮರು ಹೋರಾಟ ನೀಡಿ 1-1 ರಿಂದ ಸಮಬಲ ಸಾಧಿಸಿದರು.
ಆದರೆ, ಪ್ರಣಯ್ ಫ್ರೆಂಚ್ ಓಪನ್ನಲ್ಲಿನ ತಪ್ಪನ್ನು ಪುನರಾವರ್ತಿಸಲಿಲ್ಲ. ಶ್ರೀಕಾಂತ್ಗೆ ಮೂರನೆ ಹಾಗೂ ನಿರ್ಣಾಯಕ ಗೇಮ್ನಲ್ಲಿ ತಿರುಗೇಟು ನೀಡಲು ಅವಕಾಶ ನೀಡದೇ 21-7 ಅಂತರದಿಂದ ಜಯ ಸಾಧಿಸಿದರು.
Next Story