ಹನೂರು: ನೋಟ್ ಬ್ಯಾನ್ ವಿರೋಧಿಸಿ ಕಾಂಗ್ರೆಸ್ ಕರಾಳ ದಿನಾಚರಣೆ

ಹನೂರು, ನ.8: ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ನೋಟು ಅಮಾನೀಕರಣವನ್ನು ವಿರೋಧಿಸಿ ಹನೂರು ಹಾಗೂ ರಾಮಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕರಾಳದಿನ ಬುಧವಾರ ಆಚರಿಸಲಾಯಿತು.
ಕಾಂಗ್ರಸ್ ಕಾರ್ಯಕರ್ತರು ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಸಾಗಿದ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ವಿಶೇಷ ತಹಿಶೀಲ್ದಾರ್ ಕಚೇರಿಗೆ ಆಗಮಿಸಿ ಮನವಿ ಪತ್ರವನ್ನು ಸಲ್ಲಿಸಿಲಾಯಿತು.
ಬಳಿಕ ಸುದ್ದಿಗಾರರೂಂದಿಗೆ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಂಪಯ್ಯ, ಕೇಂದ್ರದ ಬಿಜೆಪಿ ಸರ್ಕಾರ ಕಾರ್ಪೊರೇಟ್ ಕಂಪೆನಿಗಳಿಗೆ ಲಾಭ ಮಾಡಿಕೂಂಡುವ ಉದ್ದೇಶದಿಂದ ದೇಶದಲ್ಲಿ ನೋಟು ಅಮಾನೀಕರಣ ಜಾರಿಗೂಳಿಸಲಾಯಿತು. ಇದರಿಂದ ಬಡವರಿಗೆ ಹೆಚ್ಚು ಅನನುಕೂಲವಾಗಿ ರೈತರು ಹೆಚ್ಚು ಸಾವು ನೋವುಗಳನ್ನು ಅನುಭವಿಸಬೇಕಾಯಿತು. ಅಲ್ಲದೆ, ಜಿಎಸ್‍ಟಿ ತೆರಿಗೆ ಪದ್ಧತಿಯಿಂದ ದೇಶದ ಅನ್ನದಾತರು ಆರ್ಥಿಕ ಸಂಕಷ್ಟದ ಸ್ಥಿತಿಯಲ್ಲಿ ಸಿಲುಕುವಂತಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಚಾಮರಾಜನಗರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ದೋರೆರಾಜ್ ಮಾತನಾಡಿ, ನೋಟು ಅಮಾನೀಕರಣದಿಂದ ಹಲವಾರು ಉದ್ಯೂಗಗಳಿಗೆ ಕುತ್ತು ತಂದಿದ್ದು .ಗ್ರಾಮಾಂತರ ಪ್ರದೇಶಗಳಿಂದ ವಲಸೆ ಹೋಗಿ ಪಟ್ಟಣ ಪ್ರದೇಶಗಳನ್ನು ಆಶ್ರಯಿಸಿದ ಲಕ್ಷಾಂತರ ಯುವಕರು ಕಂಗಾಲಾಗಿ ಬೀದಿ ಪಾಲಾಗಿದ್ದಾರೆ .ಇದ್ದರಿಂದ ದೇಶದ ಆರ್ಥಿಕತೆಯೂ ,ಮಂದಗತಿಯಲ್ಲಿ ಸಾಗುತ್ತಿದೆ .ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಬಸವರಾಜು, ಸದಸ್ಯೆರಾದ ಶಿವಮ್ಮ ಕೃಷ್ಣ, ಲೇಖಾ ರವಿಕುಮಾರ್, ರಾಮಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್, ತಾಲೂಕು ಸ್ಥಾಯಿ ಸಮಿತಿ ಅಧ್ಯಕ್ಷ ಜಾವದ್ ಅಹ್ಮದ್, ಪ.ಪಂ ಅಧ್ಯಕ್ಷ ಮಮತಮಹದೇವ, ಉಪಾಧ್ಯಕ್ಷ ಬಸವರಾಜು, ಮಾಜಿ ಅಧ್ಯ ಕ್ಷರಾದ ರಾಜೂಗೌಡ, ಬಾಲರಾಜ ನಾಯ್ಡು, ಮುಖಂಡರಾದ ಪುಟ್ಟರಾಜು, ಮಾದೇಶ್, ನಟರಾಜು ರಾಜೂ, ಕಿರಣ್,ಸುದೇಶ್ ಇನ್ನಿತರರು ಹಾಜರಿದ್ದರು.







