ಹನೂರು: ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ಹನೂರು, ನ.8: ತಾಲೂಕಿನ ಮಲೈಮಹದೇಶ್ವರ ಬೆಟ್ಟದ ಜಡೆಕಲ್ಲು ದೇವಸ್ಥಾನದ ಆವರಣದಲ್ಲಿ ಬುಧವಾರ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.
ಈ ಬಗ್ಗೆ ಸ್ಥಳೀಯ ನಿವಾಸಿಗಳು ಮಲೈಮಹದೇಶ್ವರ ಬೆಟ್ಟ ಆರಕ್ಷಕ ಠಾಣೆಗೆ ದೂರು ನೀಡಿದ್ದು, ಸ್ಥಳಕ್ಕೆ ಆರಕ್ಷಕ ನಿರೀಕ್ಷಕ ಷಣ್ಮುಗ ವರ್ಮ ಆಗಮಿಸಿ ಪರಿಶೀಲನೆ ನಡೆಸಿದ ಬಳಿಕ ಮೃತದೇಹವನ್ನು ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಲಾಯಿತು.
ಮೃತನ ಗುರುತು: ಎಡಗೈ ಮೈ ಮೇಲೆ ಮಚ್ಚೆ ಇದ್ದು, ಬಲ ಗೈಯಲ್ಲಿ ಸುನಂದ ಎಂಬ ಮಹಿಳೆಯ ಹೆಸರನ್ನು ಬರೆಸಿಕೂಂಡಿದ್ದಾರೆ. ನೀಲಿ ಅಂಗಿ ನೈಲಾನ್ ಪ್ಯಾಂಟ್‍ನ್ನು ಧರಿಸಿದ್ದಾರೆ. ಎತ್ತರ ಅಂದಾಜು 5 ರಿಂದ 6 ಅಡಿ ವಯಸ್ಸು 30 ರಿಂದ 35 ಅಂದಾಜಿಸಲಾಗಿದೆ.
ಈ ಸಂಬಂದ ಮಲೈಮಹದೇಶ್ವರ ಬೆಟ್ಟದಲ್ಲಿ ದೂರು ದಾಖಲಾಗಿದ್ದು, ಸಂಬಂಧ ಪಟ್ಟವರು ದೂರವಾಣಿ ಸಂಖ್ಯೆ-9480804658 ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
Next Story





