ಪ್ರತ್ಯೇಕ ಗಾಂಜಾ ಮಾರಾಟ ಪ್ರಕರಣ : ಇಬ್ಬರ ಬಂಧನ
ಬೆಂಗಳೂರು, ನ. 8: ಪ್ರತ್ಯೇಕ ಪ್ರಕರಣಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ನಗರದ ಸಿಸಿಬಿ ಪೊಲೀಸರು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಚಾಮರಾಜಪೇಟೆ, ವಾಲ್ಮೀಕಿ ನಗರದ ನಿವಾಸಿ ಆಸೀಫ್ (51) ಹಾಗೂ ಮುರುಗೇಶ್ ಪಾಳ್ಯದ ನಿವಾಸಿ ವಿಬೀಶ್ (34) ಎಂದು ಗುರುತಿಸಲಾಗಿದೆ.
ಮೇಲ್ಕಂಡ ಆರೋಪಿಗಳು ಇಲ್ಲಿನ ಮೈಸೂರು ರಸ್ತೆ ಗೋಪಾಲನ್ ಮಾಲ್ ಹಾಗೂ ಜೀವನ್ ಭೀಮಾನಗರದ ಮುರುಗೇಶ್ ಪಾಳ್ಯದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಖಚಿತ ಮಾಹಿತಿ ಮೇರೆಗೆ ದಿಢೀರ್ ದಾಳಿ ನಡೆಸಿದ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದೇ ಪ್ರಕರಣ ಸಂಬಂಧ ಮುರುಗೇಶ್ ಪಾಳ್ಯದ ನಿವಾಸಿ ನ್ಯಾನೇಶ್ ಎಂಬುವ ತಲೆ ಮರೆಸಿಕೊಂಡಿದ್ದಾರೆ. ಆರೆೋಪಿಗಳಿಂದ 1 ಲಕ್ಷ ರೂ.ಮೊತ್ತದ 1ಕೆಜಿ 300 ಗ್ರಾಂ ಗಾಂಜಾ, ಮೊಬೈಲ್‌ಫೋನ್‌ಗಳು, ನಗದು ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
Next Story





