ಸರ ಅಪಹರಣ ಪ್ರಕರಣ: ಮೂವರು ಆರೋಪಿಗಳ ಬಂಧನ
ಬೆಂಗಳೂರು, ನ. 8: ಸರ ಅಪಹರಣ, ದ್ವಿಚಕ್ರ ವಾಹನ ಕಳವು, ಮನೆಗಳವು ಪ್ರಕರಣಗಳ ಆರೋಪದ ಮೇಲೆ ಇಲ್ಲಿನ ಶಿವಾಜಿನಗರ ಠಾಣಾ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಪಾದರಾಯನಪುರ, ಜೆ.ಜೆ. ನಗರ ನಿವಾಸಿ ಇಬ್ರಾಹೀಂ ಪಾಷ (27), ಹೆಗಡೆ ನಗರದ ನಿವಾಸಿ ಫಯಾಝ್ ಅಹಮ್ಮದ್ (25) ಹಾಗೂ ಗಿರಿನಗರದ ನಿವಾಸಿ ದೇವರಾಮ್ (45) ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ 8.15ಲಕ್ಷ ರೂ.ಮೊತ್ತದ ಒಟ್ಟು 295ಗ್ರಾಂ ಚಿನ್ನಾಭರಣಗಳನ್ನು, ಒಂದು ಬೈಕ್ ವಶಪಡಿಸಿಕೊಳ್ಳಲಾಗಿದೆ. ಮೇಲ್ಕಂಡ ಆರೋಪಿಗಳ ಬಂಧನದಿಂದ ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಎಂಟು ಸರಗಳವು ಹಾಗೂ ಒಂದು ದ್ವಿಚಕ್ರ ವಾಹನ ಕಳವು ಸೇರಿದಂತೆ 9 ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





