ಗಗನಸಖಿಗೆ ಲೈಂಗಿಕ ಕಿರುಕುಳ: ವಿದ್ಯಾರ್ಥಿಯ ಬಂಧನ
ಬೆಂಗಳೂರು, ನ. 8: ಗಗನಸಖಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕೋಲ್ಕತಾ ಮೂಲದ ಕ್ಷಿತಿಜ್ ಗುರುಂಗ್ ಎಂಬ ಎಂ-ಟೆಕ್ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ. ಆರೋಪಿಯು ಇಂಡಿಗೋ ವಿಮಾನದಲ್ಲಿ ಕೋಲ್ಕತಾದಿಂದ ಬೆಂಗಳೂರಿಗೆ ಬರುತ್ತಿದ್ದ. ಈ ವೇಳೆ ಗಗನಸಖಿ ಫೌಜಿಯಾ ಎಂಬರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆಂದು ದೂರು ದಾಖಲಿಸಲಾಗಿದೆ.
ಗಗನಸಖಿ ಮೈ ಮೇಲೆ ಕೈ ಹಾಕಿದ್ದ ಆರೋಪಿ ಕ್ಷಿತಿಜ್ ಕಿರುಕುಳ ನೀಡಿದ್ದಾನೆ. ಇದನ್ನು ಪ್ರಶ್ನಿಸಿದ ಮತ್ತೋರ್ವ ಗಗನಸಖಿಗೆ ಆರೋಪಿ ಕಪಾಳ ಮೋಕ್ಷ ಮಾಡಿದ್ದಾನೆ. ಹೀಗಾಗಿ ಸಹ ಪ್ರಯಾಣಿಕರು ಗಗನಸಖಿಯರ ನೆರವಿಗೆ ಧಾವಿಸಿದ್ದು, ಆ ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
Next Story





