ನೋಟ್ ಬ್ಯಾನ್ ನಿಂದ ವೇಶ್ಯಾವಾಟಿಕೆ ಇಳಿಕೆ: ರವಿಶಂಕರ್ ಪ್ರಸಾದ್

ಭೋಪಾಲ, ನ. 8: ನಗದು ನಿಷೇಧದಿಂದ ದೇಶದಲ್ಲಿ ವೇಶ್ಯಾವಾಟಿಕೆ ಹಾಗೂ ಮಹಿಳೆಯರ ಸಾಗಾಟ ಗಣನೀಯ ಪ್ರಮಾಣದಲ್ಲಿ ಇಳಿಕೆ ಆಗಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ನಗದು ನಿಷೇಧದಿಂದ ಕಾಶ್ಮೀರದಲ್ಲಿ ಕಲ್ಲೆಸೆಯುವ ಘಟನೆಗಳು ಕಡಿಮೆ ಆಗಿವೆ ಹಾಗೂ ನಕ್ಸಲ್ ಚಟುವಟಿಕೆಗಳ ಮೇಲೆ ಕಣ್ಣಿಡಲು ಸಾಧ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಭಾರತದಲ್ಲಿ ವೇಶ್ಯಾವಾಟಿಕೆ ಕಡಿಮೆಯಾಗಿದೆ. ಮಹಿಳೆ ಮತ್ತು ಮಕ್ಕಳ ಸಾಗಾಟ ಗಣನೀಯವಾಗಿ ಕಡಿಮೆ ಆಗಿದೆ. ಇದು ನಗದು ನಿಷೇಧದ ಸಾಧನೆ ಎಂದು ಅವರು ಹೇಳಿದ್ದಾರೆ.
ವೇಶ್ಯಾವಾಟಿಕೆಯ ಕಾರಣಕ್ಕೆ ದೊಡ್ಡ ಮೊತ್ತ ನೇಪಾಳ ಹಾಗೂ ಬಾಂಗ್ಲಾದೇಶಕ್ಕೆ ಹರಿಯುತ್ತಿತ್ತು. ವೇಶ್ಯಾವಾಟಿಕೆಯಲ್ಲಿ ಪಾವತಿಗೆ 500 ಹಾಗೂ 1000 ರೂ. ನೋಟನ್ನು ಬಳಸಲಾಗುತ್ತಿತ್ತು. ಆದರೆ, ನೋಟು ನಿಷೇಧದಿಂದ ವೇಶ್ಯಾವಾಟಿಕೆ ಕಡಿಮೆ ಆಗಿದೆ ಎಂದು ಅವರು ಹೇಳಿದರು.
Next Story





