ನೋಟ್ ಬ್ಯಾನ್ ‘ಆಲೋಚನಾ ರಹಿತ ಕ್ರಿಯೆ’: ರಾಹುಲ್ ಗಾಂಧಿ

ಹೊಸದಿಲ್ಲಿ, ನ. 8: ನಗದು ನಿಷೇಧ ದುರಂತ ಹಾಗೂ ಆಲೋಚನಾ ರಹಿತ ಕ್ರಿಯೆ. ಇದರಿಂದಾಗಿ ಲಕ್ಷಾಂತರ ಪ್ರಾಮಾಣಿಕ ಜನರ ಜೀವನ ನಾಶವಾಗಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
2016 ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದ ನಗದು ನಿಷೇಧದಿಂದ ತೊಂದರೆಗೀಡಾದ ಜನರಿಗೆ ಪಕ್ಷ ಬೆಂಬಲವಾಗಿ ನಿಲ್ಲಲಿದೆ ಎಂದು ಅವರು ಹೇಳಿದ್ದಾರೆ.
ನಗದ ನಿಷೇಧದ ಬಗ್ಗೆ ಕಾವ್ಯಾತ್ಮಕವಾಗಿ ಟೀಕಿಸಿರುವ ರಾಹುಲ್ ಗಾಂಧಿ, “ಒಂದೇ ಒಂದು ಕಣ್ಣೀರ ಹನಿ ಕೂಡ ಸರಕಾರಕ್ಕೆ ಅಪಾಯಕಾರಿ. ಕಣ್ಣುಗಳು ಸಾಗರವಾಗಿ ಪರಿವರ್ತನೆಯಾಗಿ ರುವುದನ್ನು ನೀವು ನೋಡಲಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.
ನೋಟು ನಿಷೇಧದ ವರ್ಷಾಚರಣೆ ವಿರೋಧಿಸಿ ಗುಜರಾತ್‌ನ ಸೂರತ್‌ನಲ್ಲಿ ವಿರೋಧ ಪಕ್ಷಗಳು ನಡೆಸಿದ ಕರಾಳ ದಿನದ ಸಂದರ್ಭ ಸೂರತ್‌ನ ಚೌಕ್ ಬಜಾರ್ ಪ್ರದೇಶದಲ್ಲಿ ನಡೆದ ಮೊಂಬತ್ತಿ ಮೆರವಣಿಗೆಯಲ್ಲಿ ರಾಹುಲ್ ಗಾಂಧಿ ಪಾಲ್ಗೊಂಡರು.
Next Story





