ನ.9: ಜಪಮಾಲೆ ಪ್ರದರ್ಶನ
ಮಂಗಳೂರು, ನ.8: ನಗರದ ರೊಸಾರಿಯೊ ಕೆಥೀಡ್ರಲ್ ಸಭಾಂಗಣದಲ್ಲಿ ನ.9ರಂದು ಬೆಳಗ್ಗೆ 10ಕ್ಕೆ ಜಪಮಾಲೆಗಳ ಪ್ರದರ್ಶನ ನಡೆಯಲಿದ್ದು, ಮಂಗಳೂರು ಧರ್ಮಾಧ್ಯಕ್ಷ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಈ ಪ್ರದರ್ಶನವನ್ನು ಉದ್ಘಾಟಿಸುವರು ಎಂದು ಕೆಥೀಡ್ರಲ್‌ನ ಫಾ. ಜೆ. ಬಿ. ಕ್ರಾಸ್ತಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
2018ರಲ್ಲಿ ರೊಸಾರಿಯೊ ಕೆಥೀಡ್ರಲ್ 450ನೆ ವರ್ಷಾಚರಣೆ ನಡೆಸಲಿದೆ. ಆದ್ದರಿಂದ ಈ ವರ್ಷವನ್ನು ಮಂಗಳೂರು ಧರ್ಮಪ್ರಾಂತದಲ್ಲಿ ಜಪಮಾಲೆ ವರ್ಷವನ್ನಾಗಿ ಆಚರಿಸಲಾಗುತ್ತಿದೆ. ಇದರ ಅಂಗವಾಗಿ ಈ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. 9,10,11ಮತ್ತು 12ರಂದು ಬೆಳಗ್ಗೆ 10ರಿಂದ ರಾತ್ರಿ 8ರವರೆಗೆ ಪ್ರದರ್ಶನ ನಡೆಯಲಿದೆ.
ಕೇರಳದ ಪರ್ಸಿ ರೊಝಾರಿ ಸಂಸ್ಥೆಯ ಸಾಬೂ ಎಂಬ ನಾಗರಿಕರೊಬ್ಬರು ಸಂಗ್ರಹಿಸಿದ ಜಪಮಾಲೆಗಳನ್ನು ಪ್ರದರ್ಶನದಲ್ಲಿ ಇಡಲಾಗುವುದು. ಸಂತ ಜಾನ್ ಪಾವ್ಲ್ ದ್ವಿತೀಯ ಮತ್ತು ಮದರ್ ತೆರೆಸಾ ಸೇರಿದಂತೆ ಹಲವು ಸಂತರು ಆಶೀರ್ವದಿಸಿದ ಜಪಮಾಲೆಗಳು, ಶಿಲುಬೆಗಳು, ಮಾತೆ ಮರಿಯಮ್ಮನ ವಿವಿಧ ರೀತಿಯ ಪ್ರತಿಮೆಗಳು ಪ್ರದರ್ಶನಗೊಳ್ಳಲಿವೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಿ.ಜಿ. ಸೈಮನ್, ಎಲಿಜಬೆತ್ ರಾಚ್, ಇಲ್ಯಾಸ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.





