ಕೇಂದ್ರ ಸರಕಾರದ ಜನವಿರೋಧಿ ಧೋರಣೆ: ಎಸ್‌ಡಿಪಿಐ
.jpg)
ಬಂಟ್ವಾಳ, ನ. 8: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಇದರ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ವತಿಯಿಂದ ನೋಟ್ ಬ್ಯಾನ್ ವಿಫಲತೆಯ ಬಗ್ಗೆ ಉತ್ತರ ದಾಹಿತ್ವ ದಿನ ಹಾಗೂ ಕೇಂದ್ರ ಸರಕಾರದ ಜನವಿರೋಧಿ ಧೋರಣೆ ವಿರುದ್ಧ ಬಿ.ಸಿ.ರೋಡ್ ಕೈಕಂಬ ಜಂಕ್ಷನ್ ಬಳಿ ಪ್ರತಿಭಟನೆ ನಡೆಯಿತು.
ಪ್ರತಿಭಟನಕಾರರನ್ನು ಉದ್ದೇಶಿಸಿ ಎಸ್‌ಡಿಪಿಐ ಬಂಟ್ವಾಳ ಕ್ಷೇತ್ರಾಧ್ಯಕ್ಷ ಶಾಹುಲ್ ಎಸ್.ಎಚ್. ಮಾತನಾಡಿ, ಕೇಂದ್ರ ಸರಕಾರವು ಕೇವಲ ಸುಳ್ಳುಗಳನ್ನೇ ಬಂಡವಾಳ ವಾಗಿಸಿಕೊಂಡು ಜನರಿಗೆ ಮೋಸ ಮಾಡುತ್ತಿದೆ. ನೋಟ್ ಬ್ಯಾನ್ ಆಗಿ ಒಂದು ವರ್ಷವಾಯಿತು. ನಿಮ್ಮ ಅಚ್ಚೇ ದಿನ್ ಎಲ್ಲಿ? ಎಂದು ಪ್ರಶ್ನಿಸಿದ ಅವರು, ಇದರ ಬಗ್ಗೆ ನಮಗೆ ಸೂಕ್ತ ಉತ್ತರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಬಂಟ್ವಾಳ ಪುರಸಭಾ ಸದಸ್ಯ ಮುನೀಶ್ ಅಲಿ, ಎಸ್‌ಡಿಪಿಐ ಸದಸ್ಯ ಅಕ್ಬರ್ ಅಲಿ ಮಾತನಾಡಿದರು. ಈ ಸಂದರ್ಭ ಎಸ್‌ಡಿಪಿಐ ಮುಖಂಡರಾದ ಯೂಸುಫ್ ಆಲಡ್ಕ, ಯಾಕೂಬ್ ಮದ್ದಾ ಉಪಸ್ಥಿತರಿದ್ದರು. ಮಲಿಕ್ ಕೊಳಕೆ ಸ್ವಾಗತಿಸಿ, ನಿರೂಪಿಸಿದರು.
Next Story





